ಹದಿನಾಲ್ಕು ಮನೋಜ್ಞ ಕಥೆಗಳ ಗುಚ್ಛ. ಈ ಸಂಕಲನದ ಕಥೆಗಳು ಮಾನವ ಜಗತ್ತಿನ ಹಲವೆಂಟು ಮುಖಗಳನ್ನು ಪರಿಚಯಿಸುತ್ತ ಸಮಕಾಲೀನ ಕಟು ವಾಸ್ತವಗಳನ್ನು ಚಿತ್ರಿಸುತ್ತವೆ. ಸ್ಥವಿರ ಎನ್ನುವುದು ಶಾಶ್ವತ ಮತ್ತು ಜಂಗಮ ಎಂದರೆ ಚಲನಶೀಲ ಎನ್ನುವ ಅರ್ಥಗಳಿವೆ. ಇಲ್ಲಿರುವ ಕತೆಗಳು ಇವುಗಳ ಆಚೆಗೂ ಚಲಿಸುತ್ತವೆ. ಹೀಗೆ ಚಲನಶೀಲವಾಗಿರುವುದರ ಅನ್ವೇಷಣೆ ಈ ಕತೆಗಳ ಪ್ರಧಾನ ವಸ್ತು. ಅದನ್ನು ಲೇಖಕಿ ಜಯಶ್ರೀ ದೇಶಪಾಂಡೆ ಅನೇಕ ಸನ್ನಿವೇಶಗಳ ನಿರ್ಮಾಣದ ಮೂಲಕ ಅಭಿವ್ಯಕ್ತಿಸುತ್ತಾರೆ. ರೂಪಕಗಳ ಜೊತೆಜೊತೆಯಲ್ಲಿ ಸಾಗುವ ಹೆಣ್ಣಿನ ಶೋಷಣೆಯ ಇನ್ನೊಂದು ಮುಖವಾದ ‘ಬ್ಲಾಕ್ ವಿಡೊ’ ಮಾಗಿದ ಮನದ ಹೆಪ್ಪುಗಟ್ಟಿದ ಚಿಂತನೆಗಳ ‘ಸ್ಥವಿರ ಜಂಗಮಗಳಾಚೆ’ 'ಹಸೀ ಸುಳ್ಳಿನ ಹೊಸ ಸ್ವರ್ಗಗಳು' ದಯಾ ಮರಣದ ಹಿನ್ನೆಲೆಯ 'ಯೂಥನೇಶಿಯಾ ಕಾರ್ಪೊರೇಟ್ ಇತ್ಯಾದಿ' 'ಮಾದಕ ದ್ರವ್ಯ ವ್ಸಸನಿ ಹುಡುಗಿಯರ ದಾರುಣ ಕಥನ' ಆ ಹುಡುಗಿಯ ಈ ಕಥೆ' ಯಂಥ ಮತ್ತೆ ಮತ್ತೆ ಓದಿಸಿಕೊಳ್ಳುವ ಕಥೆಗಳೇ ಈ ಸಂಕಲನದ ವೈಶಿಷ್ಟ್ಯ. 'ಅಲ್ಲಿರುವುದು ನಮ್ಮ ಮನೆ' 'ಆವರ್ತ' ' ಪತಿ ಪತ್ನಿ ಔರ್ ವೋ' 'ಪಾರುಲ್' 'ಎಲ್ಲಿ ಹೋದಿ ಗಂಗಾಮಾಯಿ' 'ಹುಳ' ಇಂಥ ಕಥೆಗಳೆಲ್ಲ ಪಕ್ವವಾದ ಜೀವನಾನುಭವ,ಬದುಕನ್ನು ಸೂಕ್ಷ್ಮವಾಗಿ ನಿರೀಕ್ಷಿಸಿದ ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿಯಂತಿವೆ.
ಲೇಖಕಿ ಜಯಶ್ರೀ ದೇಶಪಾಂಡೆ ಅವರು ಮೂಲತಃ ವಿಜಯಪುರದವರು. ಮನಃಶಾಸ್ತ್ರ ಹಾಗೂ ಇಂಗ್ಲಿಷ್ ನಲ್ಲಿ ಸ್ನಾತಕೋತ್ತರ ಪದವೀಧರರು. ದೇಶ ಸುತ್ತುವುದರ ಜೊತೆಗೆ ಅಲ್ಲಿಯ ಜನ, ಭಾಷೆ, ಆಹಾರ, ಸಂಸ್ಕೃತಿಯನ್ನು ತಮ್ಮ ಲೇಖನಗಳ ಮೂಲಕ ಪರಿಚಯಿಸುತ್ತಿದ್ದಾರೆ. ಕೃತಿಗಳು : ಪದ್ಮಿನಿ, ಮೂರನೆಯ ಹೆಜ್ಜೆ, ರೇಖೆಗಳ ನಡುವೆ, ಸ್ಥವಿರ ಜಂಗಮಗಳಾಚೆ ಹಾಗೂ ಉತ್ತರಾರ್ಧ (ಕಥಾ ಸಂಕಲನಗಳು), ಯತ್ಕಿಂಚಿತ್ (ಕವನ ಸಂಕಲನ),ಮಾಯಿ ಕೆಂದಾಯಿ ಸ್ಮೃತಿ ಲಹರಿ (ಲಲಿತ ಪ್ರಬಂಧ ಸಂಕಲನ) ಹೌದದ್ದು ಅಲ್ಲ ಅಲ್ಲದ್ದು ಹೌದು (ಹಾಸ್ಯಲೇಖನ ಸಂಕಲನ), ಕಾಲಿಂದಿ (ಮಯೂರ), ಕೆಂಪು ಹಳದಿ ಹಸಿರು (ತರಂಗ), ದೂರ ದಾರಿಯ ತೀರ (ತರಂಗ) , ಬೇವು (ವಿಜಯ ಕರ್ನಾಟಕ), ಚಕ್ರವಾತ (ನೂತನ), ಸರಸ್ವತಿ ಕಾಯದ ದಿನವಿಲ್ಲ. (ಉದಯವಾಣಿ) ಇವು ಧಾರಾವಾಹಿಯಾಗಿ ...
READ MORE