ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರು ಬರೆದ ಕೃತಿ ʻಶ್ರೀ ರಾಮಾಯಣ ಪಾತ್ರ ಪ್ರಪಂಚʼ. ರಾಮಾಯಣ ಮಹಾಕಾವ್ಯದಲ್ಲಿಯ ಪ್ರತಿಪಾತ್ರವೂ ಒಂದೊಂದು ವಿಶಿಷ್ಟ ಗುಣಗಳಿಂದ ಕೂಡಿವೆ. ಹಾಗಾಗಿ ಒಂದೊಂದು ಪಾತ್ರವನ್ನೂ ಅದರ ಆದರ್ಶದೊಂದಿಗೆ ಇಲ್ಲಿ ಲೇಖಕರು ಹೇಳುತ್ತಾ ಹೋಗುತ್ತಾರೆ. ಈ ಮೂಲಕ ರಾಮಾಯಣದ ಇಡೀ ಕತೆಯನ್ನು ಆಳವಾಗಿ ಅರ್ಥೈಸಿಕೊಳ್ಳಲು ಸಾಧ್ಯ. ಇನ್ನು, ಇಲ್ಲಿನ ಕೆಲವು ಪಾತ್ರಗಳು ನಮ್ಮ ಬದುಕಿಗೆ ತುಂಬಾ ಸಾಮ್ಯವಿರುವುದನ್ನು ಗಮನಿಸಬಹುದು. ಜೊತೆಗೆ, ಪಾತ್ರದೊಂದಿಗೆ ಕಾಣಿಸುವ ಆದರ್ಶಗಳು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವಂತದ್ದು.
ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...
READ MORE