ಕರ್ನಾಟಕ ಸಂಗೀತ ಖ್ಯಾತಿಯ ಕಲಾವಿದ ಟಿ. ಎಂ. ಕೃಷ್ಣ ಅವರ ಮೂಲ ಇಂಗ್ಲಿಷ್ ಕೃತಿಯನ್ನು ಲೇಖಕಿ ಸುಮಂಗಲಾ ಅವರು ಅನುವಾದಿಸಿದ ಕೃತಿ- ಸೆಬಾಸ್ಟಿಯನ್ & ಸನ್ಸ್. . ಕರ್ನಾಟಕ ಸಂಗೀತದ ಕ್ಷೇತ್ರದಲ್ಲಿ ಮೃದಂಗವನ್ನು ವಾದ್ಯಗಳ ರಾಜ ಎಂದು ಕರೆಯಲಾಗುತ್ತದೆ. ಜೊತೆಗೆ ಶತಮಾನಗಳ ಚರಿತ್ರೆಯನ್ನು ಹೊಂದಿರುವ ಮೃದುಂಗ ಮತ್ತು ಮೃದುಂಗ ಶಿಲ್ಪಿಗಳು ಚರ್ಮ ಸಂಗ್ರಹಿಸಿ, ಒಣಗಿಸಿ, ಹದಮಾಡಿ ಅಂತಿಮವಾಗಿ ವಾದಕರ ಅಗತ್ಯಕ್ಕೆ ತಕ್ಕಂತೆ ಶೃತಿಗೊಳಿಸಿ, ಹೀಗೆ ಬಹುಹಂತಗಳಲ್ಲಿ ಮೃದುಂಗ ತಯಾರಿಸುವ ಅವರ ಕೌಶಲ ಕುರಿತು ಟಿ.ಎಂ. ಕೃಷ್ಣ ಅವರು ಮೂರು ವರ್ಷ ಕ್ಷೇತ್ರ ಅಧ್ಯಯನ, ಸಂಶೋಧನೆ ಮಾಡಿ ರಚಿಸಿದ ಕೃತಿ.
©2024 Book Brahma Private Limited.