ಡಿ.ಎಸ್. ಲಿಂಗರಾಜು ಅವರ ವಿಭಿನ್ನ ಕೃತಿ ’ಸಾವು- ಒಂದು ಹುಡುಕಾಟ’. ಬದುಕಿನ ಅಂತ್ಯದ ನಂತರ ಸಾವು ಎಂಬುದು ಎಲ್ಲರಿಗೂ ಖಚಿತವಾಗಿ ಗೊತ್ತಿದ್ದರೂ, ಸಾವಿನ ನಂತರ ಏನು ಎಂಬುದು ಯಾರಿಗೂ ಗೊತ್ತಿಲ್ಲ. ಸಮುದಾಯಗಳಲ್ಲಿ, ಅನೇಕ ನಾಗರೀಕತೆಗಳಲ್ಲಿ ಸಾವಿನ ನಂತರದ ಆಚರಣೆಗಳು, ನಂಬಿಕೆಗಳು ಭಿನ್ನವಾಗಿವೆ. ಈ ಕೃತಿಯಲ್ಲಿ ಸಾವನ್ನು ಕುರಿತ ವೈಜ್ಞಾನಿಕ ವಿವರಣೆಯೊಂದಿಗೆ ಪ್ರಾರಂಭವಾಗುವ ಸಾವನ್ನು ಕುರಿತ ಕಥನವನ್ನು ಧರ್ಮಗ್ರಂಥ, ಪುರಾಣಗಳಲ್ಲಿ ಹೇಗೆ ವಿಶ್ಲೇಷಿಸಲಾಗಿದೆ ಎಂಬುದರ ವಿಸ್ತೃತ ಚರ್ಚೆಯನ್ನು ಈ ಕೃತಿ ಮಾಡುತ್ತದೆ. ಸಾವಿನ ಕುರಿತಾಗಿ ಎಳೆಎಳೆಯಾಗಿ ವಿವರಿಸುವ ಲೇಖಕರು ಹಲವಾರು ಅಧ್ಯಾಯಗಳ ಮೂಲಕ ವೈಜ್ಞಾನಿಕ ವಿಶ್ಲೇಷಣೆಯನ್ನು ಕಟ್ಟಿಕೊಟ್ಟಿದ್ದಾರೆ.
ಮರಣವೆಂಬ ಮಹಾಪ್ರಸ್ಥಾನ, ಮಾನವನ ಪ್ರಭಾವಲಯ, ಸಾವಿನ ವಿಧಾನಗಳು, ಸಾವು ಎಂದರೇನು?, ಸಾವು ಮತ್ತು ಹುಟ್ಟುಗಳ ನಡುವೆ, ಸಾವಿಗೆ ಪ್ರಮುಖ ಕಾರಣಗಳು, ಮರಣ ಯೋಗ, ಸಾವಿನ ಮುನ್ಸೂಚನೆಗಳು, ಸಾವಿನ ಸಮಯ ಪೂರ್ವ ನಿರ್ಧರಿತವೇ?, ಸತ್ತ ನಂತರ ಏನಿದೆ?, ಜನ್ಮಾಂತರಗಳ ಅವಧಿ, ಕರ್ಮಸಿದ್ಧಾಂತ, ಸಂಚಿತ ಬದಲಾವಣೆಗಳ ತತ್ವ, ಜೀನಾ ಮರ್‌ನಾ ಯಹಾ!, ಗುಡಿಯ ನೋಡಿರಣಾ, ಆತ್ಮದ ತೂಕವೆಷ್ಟು?, ಸಾವಿನ ಅನುಭವಗಳು, ಪುನರ್ಜನ್ಮದ ಕಾರಣಗಳು, ಪ್ರಜ್ಞೆಯ ಸ್ಥಾನಾಂತರ ಹೀಗೆ ಹಲವು ಹಂತಗಳಲ್ಲಿ ಸಾವಿನ ಕುರಿತಾಗಿ ಲೇಖಕರು ವಿವರಿಸುತ್ತಾ ಹೋಗಿದ್ದಾರೆ.
©2024 Book Brahma Private Limited.