‘ಸಾರಸ್ವತ ಸಿಂಚನ’ ಕೃತಿಯು ಬೆಳವಾಡಿ ಮಂಜುನಾಥ ಅವರ ಪ್ರಬಂಧಗಳ ಸಂಕಲನವಾಗಿದೆ. ಸುಮಾರು ಆರು ವರ್ಷಗಳ ವ್ಯಾಪ್ತಿಯಲ್ಲಿ ಅವರು ನಾಡಿನ ಬೇರೆ ಬೇರೆ ವಿಶ್ವವಿದ್ಯಾಲಯಗಳು, ಅಕಾಡೆಮಿಗಳು ಮತ್ತಿತರ ಸಾರಸ್ವತ ಸಂಸ್ಥೆಗಳಲ್ಲಿನ ವಿದ್ವದ್ ಗೋಷ್ಠಿಗಳಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಗಳನ್ನುಆಯ್ದು ಇಲ್ಲಿ ಪ್ರಕಟಿಸಿದ್ದಾರೆ. ಇವುಗಳಲ್ಲಿ ಒಂದು ಜನಪದ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ್ದಾದರೆ, ಉಳಿದ ಆರು ಶಿಷ್ಟ ಸಾಹಿತ್ಯದ ವಿವಿಧ ಪ್ರಕಾರಗಳಿಗೆ, ಒಂದು ಸಾಂಸ್ಕೃತಿಕ ಹೋರಾಟ ಮತ್ತು ಕೊನೆಯದು ಸಂಗೀತಕ್ಕೆ ಸಂಬಂಧಿಸಿದವು. ಈ ಎಲ್ಲ ಪ್ರಬಂಧಗಳಲ್ಲಿ ಸಂಶೋಧನೆಯ ಜತೆಗೆ ವಿಮರ್ಶೆಯೂ ಹದವರಿತು ಬೆಸೆದುಕೊಂಡಿದೆ.
ಡಾ. ಬೆಳವಾಡಿ ಮಂಜುನಾಥ ಅವರು ಚಿಕ್ಕಮಗಳೂರು ಜಿಲ್ಲೆ ಬೆಳವಾಡಿಯಲ್ಲಿ ಜನಿಸಿದರು ಪ್ರಾಥಮಿಕ ವಿದ್ಯಾಭ್ಯಾಸ ಬೆಳವಾಡಿ ಸರ್ಕಾರಿ ಶಾಲೆ.ಪ್ರೌಢ ಶಿಕ್ಷಣ ಕಳಸಾಪುರ ವಿನಾಯಕ ಪ್ರೌಢಶಾಲೆ.ಚಿಕ್ಕಮಗಳೂರು ಐ.ಡಿ.ಎಸ್. ಜಿ ಸರ್ಕಾರಿ ಕಾಲೇಜಿನಿಂದ ಬಿ.ಎ ಪದವಿ. ಮೈಸೂರು ವಿಶ್ವ ವಿದ್ಯಾನಿಲಯದಿಂದ ಕನ್ನಡ ಎಂ. ಎ ಪ್ರಥಮ ಶ್ರೇಣಿಯೊಂದಿಗೆ ಚಿನ್ನದ ಪದಕ.ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಕುವೆಂಪು ವಿಶ್ವ ವಿದ್ಯಾನಿಲಯದಿಂದ ಬಿ.ಇಡಿ ಪದವಿ. ಧಾರವಾಡ ದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಿ.ಎಚ್ ಡಿ.ಪದವಿ. ಚನ್ನರಾಯ ಪಟ್ಟಣ ಉಪನ್ಯಾಸಕರಾಗಿ ವೃತ್ತಿ ಪ್ರಾರಂಭಿಸಿದರು. . ಮೂಡಿಗೆರೆ ಹಾಗೂ ಚಿಕ್ಕಮಗಳೂರು ಸರ್ಕಾರಿ ಪದವಿ ಪೂರ್ವ ...
READ MORE