‘ಸಂತೆಯಲ್ಲೊಂದು ಮನೆ’ ಕೃತಿಯು ವೀಣಾ ಬನ್ನಂಜೆ ಅವರ ಬರಹಗಳ ಸಂಕಲನವಾಗಿದೆ. ಕೃತಿಯಲ್ಲಿ ಕೆಲವೊಂದು ವಿಚಾರಗಳು ಹೀಗಿವೆ : “ಕೃಷ್ಣ ಮಣ್ಣ ತಿಂದಾಗ ತಾಯಿ ಕೇಳಿದಳು. ಕೃಷ್ಣ ಹೌದು ಎಂದು ಸತ್ಯ ಹೇಳಿದ್ದರೆ.. ಎರಡು ಏಟು ತಿನ್ನುವಲ್ಲಿಗೆ ಪ್ರಕರಣ ಮುಗಿದಿರುತ್ತಿತ್ತು. ಅವನು ‘ಇಲ್ಲ’ ಎಂದು ಸುಳ್ಳು ಹೇಳಿದನಲ್ಲ.. ತಾಯಿಗೆ ಬಾಯಿಯಲ್ಲಿ ಬ್ರಹ್ಮಾಂಡ ದರ್ಶನವಾಯಿತು. ಸತ್ಯದರ್ಶನ ಹೀಗೆ ಒಂದು ಸುಳ್ಳಿನ ಕಟ್ಟಿನಲ್ಲಿದೆ. ಚಿನ್ನದ ಕಟ್ಟಿಗೆ ಮಾರುಹೋದವರಿಗೆ ಸತ್ಯ ಕಾಣಿಸದು” ಎಂದಿದೆ.
ವೀಣಾ ಬನ್ನಂಜೆ ಅವರು ಮೂಲತಃ ಉಡುಪಿ ಜಿಲ್ಲೆಯವರು. ಇವರ ತಂದೆ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು. ಎಚ್ಚರದ ಕನಸು (ಕಥಾ ಸಂಕಲನ), ಅಕ್ಕಮಹಾದೇವಿಯ ದೈ (ವೈಚಾರಿಕ) ಸಂತೆಯಲ್ಲೊಂದು ಮನೆ ೨೦೧೧ (ಅಂಕಣ ಬರಹ ಕೃತಿಗಳನ್ನು ವೀಣಾ ಬನ್ನಂಜೆ ಪ್ರಕಟಿಸಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿನಿಧಿ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ, ಕಾವ್ಯಾನಂದ ಪುರಸ್ಕಾರಗಳು ಇವರಿಗೆ ಸಂದಿದೆ. ...
READ MORE