ಲೇಖಕ ನರೇಂದ್ರ ಕೋಹಲಿ ಅವರು ಹಿಂದಿಯಲ್ಲಿ ಬರೆದಿರುವ ಕೃತಿಯನ್ನು ಎಂ.ವಿ ನಾಗರಾಜರಾವ್ ಅವರು ಕನ್ನಡಕ್ಕೆ ಸಂಘರ್ಷ ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. 2010ರಲ್ಲಿ ಈ ಕೃತಿ ದ್ವಿತೀಯ ಮುದ್ರಣ ಕಂಡಿದೆ. ಆನಂದ ರಾಮಾಯಣ, ಅದ್ಭುತ ರಾಮಾಯಣ, ಅಧ್ಯಾತ್ಮ ರಾಮಾಯಣ, ಭುಶುಂಡಿ ರಾಮಾಯಣ, ನಾರದ ರಾಮಾಯಣ, ವಾಸಿಷ್ಟ ರಾಮಾಯಣ, ಮನೋಹರ ರಾಮಾಯಣ, ತುಳಸೀ ರಾಮಾಯಣ ಮುಂತಾದ ಹತ್ತಾರು ರಾಮಾಯಣಗಳು ಜಗತ್ತಿನಲ್ಲಿ ಪ್ರಸಿದ್ಧವಾಗಿವೆ. ಈ ಎಲ್ಲಾ ರಾಮಾಯಣಗಳಿಗೂ ವಾಲ್ಮೀಕಿ ರಾಮಾಯಣವೇ ಮೂಲ ಪ್ರೇರಣೆ.
©2024 Book Brahma Private Limited.