‘ರೇಖಾನುಸಂಧಾನ’ ಕೃತಿಯು ಪುಂಡಲೀಕ ಕಲ್ಲಿಗನೂರ ಅವರ ‘ನೀಲು’ವಿನಿಂದ ರಾಮಾಯಣದವರೆಗೆ ರಡನೆಒಂದು ನೋಟ–ಮಾಟದ ಧ್ಯಾನ ಕುರಿತ ರೇಖಾಚಿತ್ರಗಳ ಮಾಹಿತಿಯನ್ನು ಒಳಗೊಂಡಿದೆ. ನೀಲುಗೊಂದು ಚಿತ್ರದ ಶಾಲು, ನೋಟ-ಮಾಟದ ರೇಖಾಚಿತ್ರಗಳು, ರಾಜ್ -ಕೀಯ ವ್ಯಂಗ್ಯ ಚಿತ್ರಗಳು, ಅಂತರಂಗದ ಮೃದುಂಗ, ಮಿಣಿ ಮಿಣಿ ಸೋಮೆನಿ, ಚಿತ್ರಾಗ್ನಿ, ಕನ್ನಡ ಪ್ರಭೆಯ ರೇಖಾ ಚಿತ್ರಗಳು, ಕಾವ್ಯ- ಕಥಾತ್ಮಕ ರೇಖಾ ಚಿತ್ರಗಳು, ರಾಮಾಯಣದ ಕಿರು ಚಿತ್ರ ನೋಟ, ಸಾಧು ಸಂತರು ಮತ್ತು ರಾಜ ಪರಿವಾರ, ಶಿಲ್ಪಕಲಾ ಪ್ರೇರಿತ ರೇಖೆಗಳು, ಶಿಲ್ಪಕಲೆ ಮತ್ತು ವಚನ ಸಾಹಿತ್ಯ ಮತ್ತು ಹನ್ನೆರಡನೆ ಶತಮಾನದ ಅಭಿವ್ಯಕ್ತಿಗಳಾಗಿ, ಇಷ್ಟು ಮಾಹಿತಿಯನ್ನು ನಾವು ಈ ಕೃತಿಯ ಮೊದಲ ಭಾಗದಲ್ಲಿ ಕಾಣಬಹುದಾಗಿದೆ. ಅನುಬಂಧ ಭಾಗದಲ್ಲಿ ಮೆಲುಕು: ಬಳುಕುವ ಗೆರೆಗಳು.. ಪುಸ್ತಕ ವಿಮರ್ಶೆ, ಕಲೆಯ ಕೈ ಹಿಡಿದು… ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ದ ಮೀಟ್- ದ ಹಿಂದು ಪತ್ರಿಕೆಯ ಒಂದು ಸಂದರ್ಶನ. ರಾಘವ, ಮುನ್ನುಡಿ: ನೋಡುವ ಮುನ್ನ… ಎಂ.ಎಚ್ ಕೃಷ್ಣಯ್ಯ, ನಲ್ನುಡಿ: ರೇಖೆಗಳೊಂದಿಗೆ ಅನುಸಂಧಾನ.. ದಿನೇಶ್ ಕುಮಾರ್ ಎಸ್.ಸಿ, ವಚನ ಚಿತ್ರ ಸಂಗಮ: ರೇಖಾಚಿತ್ರಗಳ ರಾಜ-ಗೊ.ರು. ಚನ್ನಬಸಪ್ಪ, ಶಿಶುವಿನೊಂದಿಗೆ ತೊಟ್ಟಲು ತೂಗುವ ಪರಿ: ಎಚ್.ಎ. ಅನಿಲಕುಮಾರ, ಶಿಲ್ಪಕಲಾ ದೇಗುಲಗಳು-ಕನ್ನಡಪ್ರಭ ಮತ್ತು ವಿಶ್ವವಾಣಿ ಇವೆಲ್ಲವುಗಳನ್ನೂ ಒಳಗೊಂಡಿದೆ.
ರೇಖಾಚಿತ್ರ ಕಲಾವಿದ ಹಾಗೂ ಸಾಹಿತಿ ಪುಂಡಲೀಕ ಕಲ್ಲಿಗನೂರ ಅವರು ಗದಗ ಜಿಲ್ಲೆಯ ಗಜೇಂದ್ರಗಡದವರು. ತಂದೆ ವೀರಪ್ಪ, ತಾಯಿ ಮಲ್ಲಮ್ಮ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಅವರ ರೇಖಾಚಿತ್ರಗಳು ಬೆಳಕು ಕಂಡಿವೆ. ಪುಸ್ತಕಗಳಿಗೆ ಮುಖಪುಟಗಳನ್ನು ರಚಿಸಿದ್ದಾರೆ. ಕೃತಿಗಳು: ಸಲಿಲಧಾರೆ, ಪ್ರೀತಿಮಳೆ (ಕವನ ಸಂಕಲನಗಳು), ದುರ್ಗಮ (ನಾಟಕ) ಕಾಡು ನಮ್ಮ ನಾಡು (ಮಕ್ಕಳ ನಾಟಕ) ಅರಿವೇ ಗುರು (ಪ್ರಬಂಧಗಳು) ಪ್ರಭಾತ್ ಸರ್ಕಸ್ (ಕಥಾಸಂಕಲನ) ಬೇಲೂರು ಹಳೇಬೀಡು – ಶಿಲ್ಪಕಲಾ ಸಾಮ್ರಾಜ್ಯ (ಪರಂಪರೆ ಕಳಕಳಿಯ ಲೇಖನಗಳು), "ಶಿಲ್ಪಕಲಾ ದೇಗುಲಗಳು" ಗ್ರಂಥಕ್ಕೆ ಇತ್ತೀಚೆಗಷ್ಟೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಲಂಕೇಶ್ ಪತ್ರಿಕೆಯ ನೀಲು ಕವಿತೆಗಳಿಗೆ ಇವರದೇ ರೇಖಾ ಚಿತ್ರ ...
READ MORE