ರಂಗಭೂಮಿಯ ಕನ್ನಡ ಸಂವೇದನೆ

Author : ರಾಮಕೃಷ್ಣ ಮರಾಠೆ

Pages 91

₹ 25.00




Year of Publication: 2003
Published by: ಅಲ್ಲಮ್ಮಪ್ರಭು ಜನ ಕಲ್ಯಾಣ ಸಂಸ್ಥೆ
Address: ಸಿದ್ಧ ಸಂಸ್ಥಾನಮಠ, ಚಿಂಚಣಿ-591272, ಬೆಳಗಾವಿ ಜಿಲ್ಲೆ

Synopsys

‘ರಂಗಭೂಮಿಯ ಕನ್ನಡ ಸಂವೇದನೆ’ ಕೃತಿಯು ರಾಮಕೃಷ್ಣ ಮರಾಠೆ ಅವರ ರಂಗಭೂಮಿಯ ಕುರಿತ ಲೇಖನ ಸಂಕಲನವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಗಡಿಯತ್ತಿನ ಕನ್ನಡದ ಯೋಗಕ್ಷೇಮಕ್ಕೆ ಶ್ರೀಮಠ ಹಾಗೂ ಕನ್ನಡಿಗರ ಒಳಗೆ ರಾಜ್ಯೋತ್ಸವವನ್ನು ವಿಧಾಯಕವಾಗಿ ಆಚರಿಸುತ್ತ * ನಾಡಿನ ಹಿರಿಯ ಸಾಹಿತಿಗಳನ್ನು, ವಿದ್ವಾಂಸರನ್ನು ಬರಮಾಡಿಕೊಂಡು ಕನ್ನಡ ಕನ್ನಡಿಗ ಕರ್ನಾಟಕಕ್ಕೆ ನಾವು ಮಾಡಬೇಕಾದ ಕರ್ತವ್ಯವನ್ನು - ಕುರಿತು, ಅರಿವು ಮೂಡಿಸುವ ಪ್ರಯತ್ನ ಮಾಡುತ್ತಲಿವೆ. ಅಕ್ಷರ ಲೋಕದ ಈ ಮೂಲಕವೂ ಕನ್ನಡ ಕೈಂಕರ್ಯ ಮಾಡುವ ಸದುದ್ದೇಶದಿಂದ ಶ್ರೀಮಠದ ಅಂಗ ಸಂಸ್ಥೆ, ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆಯ ಮೂಲಕ “ಕನ್ನಡ - ಜಾಗೃತಿ ಪುಸ್ತಕ ಮಾಲೆ' ಪ್ರಾರಂಭಿಸಿ ಹನ್ನೊಂದು ಮೌಲಿಕ ಕನ್ನಡಪರ ಪುಸ್ತಕಗಳನ್ನು ಪ್ರಕಟಿಸಿದೆ. ಇದೀಗ ಹನ್ನೆರಡನೆಯ ಕೃತಿಯಾಗಿ “ರಂಗಭೂಮಿಯ ಕನ್ನಡ ಸಂವೇದನೆ ಓದುಗರ ಕೈಗಿಡುತ್ತಿದ್ದೇವೆ. ರಂಗಭೂಮಿ ಒಂದು ಕಾಲಕ್ಕೆ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕೆಲಸ ಮಾಡುವುದರ ಜತೆಯಲ್ಲಿ - ಕನ್ನಡ ಭಾಷಾ ಬೆಳವಣಿಗೆ ಹಾಗೂ ಪೋಷಣೆಯಲ್ಲಿ ಬಹು ಮುಖ್ಯ ಪಾತ್ರವಹಿಸಿದೆ. ಗಡಿಯಲ್ಲಿನ ಕನ್ನಡ ಗಟ್ಟಿಗೊಳ್ಳುವಲ್ಲಿಯೂ ಕಾರ್ಯನಿರ್ವಹಿಸಿದೆ. ಶಾಂತಕವಿಗಳು, ಕೊಣ್ಣೂರು ನಾಟಕ ಮಂಡಳಿ, ಏಣಗಿ ಬಾಳಪ್ಪ ನವರ ನಾಟಕ ಮಂಡಳಿ ಇನ್ನೂ ಹಲವಾರು ನಾಟಕ ಮಂಡಳಿಗಳು ಕನ್ನಡಿಗರ ಕೃತಜ್ಞತೆಗೆ ಪಾತ್ರವಾಗಿವೆ. ಶ್ರೀ ರಾಮಕೃಷ್ಣ ಮರಾಠಯವರಿಗೆ ವೃತ್ತಿರಂಗಭೂಮಿಯ ಕನ್ನಡ ಸೇವೆ ಕುರಿತು ಕೇಳಿಕೊಂಡಾಗ, ಆಸಕ್ತಿವಹಿಸಿ ಬಹು ಬೇಗನೇ “ರಂಗಭೂಮಿಯ ಕನ್ನಡ ಸಂವೇದನೆ ಬರೆದುಕೊಟ್ಟಿದ್ದಾರೆ. ಅವರಿಗೆ ನಮ್ಮ ಕೃತಜ್ಞತೆಗಳು. ಈ ಗ್ರಂಥಕ್ಕೆ ಗ್ರಂಥ ದಾಸೋಹಿಗಳಾಗಿ ಮುಂದೆ ಬಂದವರು, ಚಿಕ್ಕೋಡಿಯ ಪ್ರಸಿದ್ಧ ವಕೀಲರಾದ ಶ್ರೀ ಸದ್ಗುರು ವಾಮನರಾವ್‌, ಸದರ ಜೋಷಿ ಅವರು, ಕನ್ನೂರಿನ ಶಾಂತಿ ಕುಟೀರದ ಸದ್ಗುರು ಗಣಪತರಾವ್‌ ಮಹಾರಾಜರ ಕೇವಲ ಶಿಷ್ಯರು, ಗುರುಗಳ ಸಂಗದಿಂದ ಮನೆಯಲ್ಲಿ ಧಾರ್ಮಿಕ ಸಂಸ್ಕೃತಿ ರೂಢಿಸಿಕೊಂಡು, ಆದರ್ಶ ಸಂಸಾರ ಹೇಗಿರಬೇಕೆಂಬುದಕ್ಕೆ ಸಾಕ್ಷಿಯಂತಿದ್ದಾರೆ. ವಕೀಲಿ ವೃತ್ತಿಯಲ್ಲಿಯೂ ಯಶಸ್ಸು ಕಂಡಿದ್ದಾರೆ. 2003-2004ನೇ ಸಾಲಿನ ವಕೀಲರ ಸಂಘವ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಕ್ಕಳಾದ ಪ್ರೀತಿ, ಪ್ರಸಾದ ಅವರನ್ನು ವಕೀಲ ವೃತ್ತಿಗೆ ತರಬೇತಿಗೊಳಿಸುತ್ತಿದ್ದಾರೆ. ಸದರ ಜೋಷಿಯವರು ವೃತ್ತಿ ರಂಗಭೂಮಿಯ ಕುರಿತು ವಿಶೇಷ ಆಸಕ್ತಿ ಹೊಂದಿದ್ದಾರೆ ಎಂದು ಪ್ರಕಾಶಕರು ತಮ್ಮ ಮೊದಲ ಮಾತಿನಲ್ಲಿ ವಿಶ್ಲೇಷಿಸಿದ್ದಾರೆ.

About the Author

ರಾಮಕೃಷ್ಣ ಮರಾಠೆ
(25 May 1958)

ನಾಟಕಕಾರ ರಾಮಕೃಷ್ಣ ಮರಾಠೆ ಅವರು 1958 ಮೇ 25 (ಸಿಂದಗಿ-ಬಿಜಾಪುರ) ಜನಿಸಿದರು. ಕನ್ನಡಲ್ಲಿ ಪಿಎಚ್‌.ಡಿ ಪದವೀಧರರು. ಕನ್ನಡ ಅಧ್ಯಾಪಕರು. ‘ಉತ್ತರ ಕರ್ನಾಟಕದ ರಂಗಭೂಮಿ, ಕೊಣ್ಣೂರ ನಾಟಕ ಕಂಪನಿ, ಈ ರಂಗಭೂಮಿಯ ಕನ್ನಡ ಸಂವೇದನೆ’ ಅವರ ಸಂಶೋಧನಾ ಕೃತಿಗಳು. ‘ರಾಮಧಾನ್ಯ, ದಾಸೋಹ; ಅಲ್ಲಮಲೀಲೆ’ ಅವರ ಪ್ರಮುಖ ನಾಟಕ. ‘ಬಿ.ಆರ್. ಅರಿಷಿಣಗೋಡಿ; ಬೆಳಗಾವಿ ಭಗೀರಥ; ವಿಶ್ವನಾಥ ಕತ್ತಿ’ ಅವರ ಜೀವನ ಚಿತ್ರಣ ಕೃತಿಗಳನ್ನು ಸಂಪಾದಿಸಿದ್ದಾರೆ.  ‘ಹರಿಹರನ ನಾಲ್ಕು ರಗಳೆಗಳು, ನಾಟ್ಯಭೂಷಣ ಏಣಗಿ ಬಾಳಪ್ಪ, ವೃತ್ತಿ ರಂಗದ ಮಹತ್ತರ ನಾಟಕಗಳು’ ಅವರ ಸಂಪಾದಿತ ಕೃತಿಗಳು. ಅಲ್ಲದೆ ‘ದಕ್ಷಿಣದ ದೇಸೀ ದೇವರು ಶ್ರೀ ಖಂಡೋಬಾ; ಭವಿರ ...

READ MORE

Related Books