ಪುರಾಣ ನಾಮ ಚೂಡಾಮಣಿ

Author : ಬೆನಗಲ್ ರಾಮರಾವ್

Pages 649




Year of Publication: 1941
Published by: ಮೈಸೂರು ವಿಶ್ವವಿದ್ಯಾಲಯ
Address: ಮೈಸೂರು

Synopsys

ಬೆನಗಲ್ ರಾಮರಾವ ಹಾಗೂ ವಿದ್ವಾನ್ ಪಾನ್ಯಂ ಸುಂದರಶಾಸ್ತ್ರಿ ಅವರು ರಚಿಸಿದ ಹಾಗೂ ಬಿ.ಎಂ. ಶ್ರೀಕಂಠಯ್ಯ ಅವರ ಪ್ರಧಾನ ಸಂಪಾದಕತ್ವದ ಕೃತಿ-ಪುರಾಣ ನಾಮ ಚೂಡಾಮಣಿ. ಸಂಸ್ಕೃತ ಭಾಷೆಯಲ್ಲಿರುವ ಪುರಾಣ, ಇತಿಹಾಸದಲ್ಲಿ ಕಾಣಬರುವ ದೇವತೆಗಳು, ಊರು, ಸ್ಥಳ, ಋಷಿ-ಮುನಿಗಳು, ದೇಶ-ಪರ್ವತ, ನದಿ, ಪುಣ್ಯಕ್ಷೇತ್ರ ಇತ್ಯಾದಿಗಳ ಬಗ್ಗೆ ಹಾಗೂ ಇವುಗಳ ಹಿನ್ನೆಲೆಯಲ್ಲಿ ಸೃಷ್ಟಿಯಾದ ಕಥೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿದಿರಲಿ ಎಂಬ ಉದ್ದೇಶದೊಂದಿಗೆ ರಚಿತವಾದ ಕೃತಿ ಇದು. ಅಲ್ಲದೇ, ಮುಖ್ಯ ಭಾಗಗಳು ಎಂದು ಪರಿಗಣಿತವಾದ ದೇವಿ ಭಾಗವತ, ಮಾರ್ಕಂಡೇಯ ಪುರಾಣ, ಹರಿವಂಶ, ಲಿಂಗಪುರಾಣ, ಸ್ಕಂದ ಪುರಾಣ, ಅದ್ಭುತ ರಾಮಾಯಣ ಇತ್ಯಾದಿ ಕಥೆಗಳನ್ನೂ ಸೇರಿಸಲಾಗಿದೆ. ಈ ಎಲ್ಲ ಕಥಾವಲಯದ ಪ್ರತಿ ಪಾತ್ರದ ಪರಿಚಯ ಮಾತ್ರವಲ್ಲ; ಸಂಕ್ಷಿಪ್ತವಾಗಿ ಕಥಾ ಸಂದರ್ಭದ ಮಹತ್ವವನ್ನೂ ವಿವರಿಸಿದೆ.

About the Author

ಬೆನಗಲ್ ರಾಮರಾವ್ - 08 May 1943)

ಕರ್ನಾಟಕದ ನಕಾಶೆ ರೂಪಿಸಿದ ಬೆನಗಲ್ ರಾಮರಾವ್ ಅವರು “ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ” ಎಂಬ ಕವಿತೆಯ ಮೂಲಕ ಕನ್ನಡ ನಾಡಿನಲ್ಲಿ ಚಿರಪರಿಚಿತರಾದವರು. ಕವಿ, ನಾಟಕಕಾರ ಬೆನಗಲ್ ರಾಮರಾಯರು ಕೋಶರಚನೆ ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ಕೃತಿಗಳ ಸಂಪಾದಕರೂ ಆಗಿದ್ದರು. ‘ಸುವಾಸಿನಿ’ ಪತ್ರಿಕೆಯ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಬೆನಗಲ್ ರಾಮರಾವ್ ತಂದೆ ಮಂಜುನಾಥಯ್ಯ-ತಾಯಿ ರಮಾಬಾಯಿ. ಮುಲ್ಕಿ, ಮಂಗಳೂರು, ಪುತ್ತೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಅವರು ಜೀವವಿಜ್ಞಾನ, ಭೂಗರ್ಭಶಾಸ್ತ್ರ ಮತ್ತು ಕನ್ನಡ ವಿಷಯಗಳಲ್ಲಿ ಬಿ.ಎ. ಪದವಿ ಗಳಿಸಿದ್ದರು. 1900ರಲ್ಲಿ ಮದರಾಸು ವಿಶ್ವವಿದ್ಯಾಲಯಗಳಲ್ಲಿ ಎಂ.ಎ. ಪದವಿ ಪಡೆದರು. ಮುಂಬಯಿ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ ಪೂರ್ಣಗೊಳಿಸಿದರು. ...

READ MORE

Related Books