ಸಂಧ್ಯಾ ಅವರು ಅಂತಹ ಕಾಲದ ಸ್ತ್ರೀಯರು ಹೇಗೆ ಬಾಳಿ- ಬದುಕಿದರೆಂಬ ಬಗ್ಗೆ ಪ್ರಾಚೀನ ಕರ್ನಾಟಕದ ಮಹಿಳಾಲೋಕ ಕೃತಿಯಲ್ಲಿ ತೋರಿಸಲು ಶ್ರಮಿಸಿದ್ದಾರೆ. ಇದರಲ್ಲಿಯೂ ಚೆನ್ನಾಗಿ ಆಡಳಿತ ನಡೆಸಿದ ರಾಜಕೀಯದಲ್ಲಿದ್ದ ಸ್ತ್ರೀಯರ ಉಲ್ಲೇಖವೇ ಹೆಚ್ಚಾಗಿದೆ. ಮಕ್ಕಳಿಲ್ಲದೆ ರಾಜ ಸತ್ತಾಗ ರಾಜ್ಯದ ಜವಾಬ್ದಾರಿ ಹೊತ್ತ ಮಹಿಳೆಯರು ಅಸ್ತಿತ್ವವನ್ನು ಉಳಿಸಲು ಪಟ್ಟ ಕಷ್ಟ-ನಷ್ಟಗಳನ್ನು, ಕರ್ನಾಟಕದಲ್ಲಿ ರಾಣಿಯರ ದತ್ತಕಗಳು ಅಧ್ಯಾಯದಲ್ಲಿ ವಿವರಿಸಿದ್ದಾರೆ. ಹಾಗೆಯೇ ಪೆಣ್ಣುಯ್ಯಲ್, ಸಂಗೀತ-ನೃತ್ಯಕಲೆಗಳಿಗೆ ಪ್ರಾಚೀನ ಅರಸಿಯರ ಕೊಡುಗೆ, ಮಹಿಳೆಯರ ಸಾಹಸ, ಧಾರ್ಮಿಕ ಕಾರ್ಯಗಳಲ್ಲಿ ಮಹಿಳೆಯರ ಪಾತ್ರ ಮೊದಲಾದ ಅಧ್ಯಾಯಗಳಲ್ಲಿ ಮಹಿಳೆಯರು ತಮ್ಮನ್ನು ಹೇಗೆ ತೊಡಗಿಸಿಕೊಂಡಿದ್ದರೆಂಬ ಬಗ್ಗೆ ವಿವರಿಸಿದ್ದಾರೆ. ಹೆಚ್ಚಿಗೆ ಶಾಸನಗಳನ್ನಾಧರಿಸಿ ಬರೆದಿರುವ ಈ ಲೇಖನಗಳ ಗುಚ್ಛ ಒಂದು ಅಧಿಕೃತ ಕೃತಿಯಾಗಿದೆ. ಇಲ್ಲಿ ಊಹಾ ಪೋಹಗಳಾಗಲೀ, ಕಲ್ಪಿತ ವಿಷಯಗಳಿಗಾಗಲೀ ಸ್ಥಳವಿಲ್ಲ. ಹೀಗಾಗಿ ಪ್ರಾಚೀನ ಕರ್ನಾಟಕದ ಮಹಿಳೆಯರ ಬಗ್ಗೆ ತಿಳಿದುಕೊಳ್ಳಲು ಇದೊಂದು ಅಧಿಕೃತ ಮಾಹಿತಿಯುಳ್ಳ ಗ್ರಂಥ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
©2024 Book Brahma Private Limited.