ಪೀಠಿಕಾ ಪ್ರಕರಣ

Author : ರಾಧಾಕೃಷ್ಣ ಕಲ್ಚಾರ್

Pages 222

₹ 180.00




Year of Publication: 2022
Published by: ನಿವೇಶ ಪ್ರಕಾಶನ
Address: ವಿಟ್ಲ

Synopsys

ಲೇಖಕ ರಾಧಾಕೃಷ್ಣ ಕಲ್ಚಾರ್ ಅವರು ಯಕ್ಷಗಾನ ಪ್ರಸಂಗಗಳನ್ನಾಧರಿಸಿದ 140 ಪುರಾಣ ಪಾತ್ರಗಳ ಸ್ವಾತ್ಮ ನಿವೇದನೆಯ ಕೃತಿ ಪೀಠಿಕಾ ಪ್ರಕರಣ. ಸುಬ್ರಾಯ ಸಂಪಾಜೆ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಕಾಲಘಟ್ಟದ ಮುಂಚೂಣಿಯ ಅರ್ಥಧಾರಿಯಾಗಿರುವ ರಾಧಾಕೃಷ್ಣ ಕಲ್ಚಾರ್ ಅವರ "ಪೀಠಿಕಾ ಪ್ರಕರಣ"ವು ಒಂದು ಅಪೂರ್ವ ಕೃತಿಯಾಗಿದ್ದು ಯಕ್ಷಗಾನ ಅರ್ಥ ಸಾಹಿತ್ಯಕ್ಕೆ ಅನನ್ಯ ಕೊಡುಗೆಯಾಗಿದೆ. ಯಕ್ಷಗಾನ ರಂಗದಲ್ಲಿ ಮಹಾಕವಿ ಪ್ರತಿಭೆಯ ಹಲವು ಅರ್ಥಧಾರಿಗಳು ಆಗಿ ಹೋಗಿದ್ದಾರೆ. ಅಪೂರ್ವ ಪ್ರತಿಭಾ ಸಂಪನ್ನರು ಈಗಲೂ ಇದ್ದಾರೆ. ಆದರೆ ಇಲ್ಲಿಯ ವಾಚಿಕ ಸಂಪತ್ತು ಅಕ್ಷರ ರೂಪದಲ್ಲಿ ದಾಖಲಾಗದಿರುವುದು ಈ ಕ್ಷೇತ್ರದ ದೊಡ್ಡ ಕೊರತೆ. ಆಡಿ ಮರೆಯಾಗಬಹುದಾದ ವಾಙ್ಮಯವನ್ನು ಕಲ್ಚಾರ್ ಅವರು ಇಲ್ಲಿ ಬರೆಹ ರೂಪಕ್ಕಿಳಿಸಿ ಮಹದುಪಕಾರ ಮಾಡಿದ್ದಾರೆ. ಈ ಕೃತಿಯ ಮೂಲಕ ತನ್ನ ಬಾಳ್ವೆಗೂ ಅಮರತ್ವವನ್ನು ಕಾಣಿಸಿದ್ದಾರೆ ಎಂದಿದ್ದಾರೆ.

About the Author

ರಾಧಾಕೃಷ್ಣ ಕಲ್ಚಾರ್
(03 September 1965)

ರಾಧಾಕೃಷ್ಣ ಕಲ್ಚಾರ್ ಅವರು ಸುಳ್ಯ ತಾಲೂಕಿನ ಪಂಜ ಗ್ರಾಮದ ಕಲ್ಚಾರ್ ಎಂಬಲ್ಲಿ ಜನಿಸಿದರು. ತಂದೆ ಮಾಣಿಪ್ಪಾಡಿ ಕೇಶವ ಭಟ್ಟ, ತಾಯಿ ಕನಕಲಕ್ಷ್ಮಿ. ಪ್ರಸ್ತುತ ವಿಟ್ಲದಲ್ಲಿ ವಾಸವಾಗಿದ್ದಾರೆ. ನಾಡಿನ ಸುಪ್ರಸಿದ್ಧ ಅರ್ಥಧಾರಿ ಕಲಾವಿದರಾಗಿರುವ ರಾಧಾಕೃಷ್ಣ ಕಲ್ಚಾರರು ಉಪನ್ಯಾಸಕ, ಅಂಕಣಕಾರ, ಸಾಹಿತಿ,ವಿಮರ್ಶಕ ,ಭಾಷಣಕಾರ,ಹೀಗೆ ಹತ್ತು ಹಲವು ರಂಗಗಳಲ್ಲಿ ತೊಡಗಿಸಿಕೊಂಡ ಬಿಡುವಿಲ್ಲದ ಸಾಧಕ. ಕೂಡುಮನೆ  (ಕಾದಂಬರಿ), ಅವರವರ ದಾರಿ (ಕಥಾಸಂಕಲನ) , ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ - ಇವರ ಕೃತಿಗಳು. ಜೊತೆಗೆ ತರಂಗ,ಉತ್ಥಾನಗಳಲ್ಲಿ ಅಂಕಣಕಾರಾಗಿದ್ದಾರೆ. ಸದ್ಯ ಹೊಸದಿಗಂತ ಪತ್ರಿಕೆಯಲ್ಲಿ ಆ ಲೋಚನ ಹಾಗೂ ತುಷಾರ ಪತ್ರಿಕೆಯಲ್ಲಿ ಉಲಿಯ ಉಯ್ಯಾಲೆ ಅಂಕಣದ ಲೇಖರಾಗಿದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದ ...

READ MORE

Related Books