ಲೇಖಕ ಸಂತೋಷ್ ರಾವ್ ಪೆರ್ಮುಡ ಅವರ ಪ್ರವಾಸ ಕಥನ ಪರ್ಯಟನೆ. ಪ್ರಕಾಶ್ ಭಟ್ ಅವರು ಈ ಕೃತಿಗೆ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಃಏಳುವಂತೆ, ಸಂತೋಷ್ ರಾವ್ ಸರ್ಮುಡ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಜ್ಞಾನವಿಕಾಸ ತರಬೇತಿ ಸಂಸ್ಥೆ ಧಾರವಾಡ ಇಲ್ಲಿ ಪ್ರಾಂಶುಪಾಲರು, ಸಂಸ್ಥೆಯಲ್ಲಿಯ ತೆರಪಿಲ್ಲದ ಕೆಲಸದ ನಡುವೆಯೂ ಕ್ರಿಯಾರಿಲರಾಗಿ ವಾರಕ್ಕೆ 3-4 ಲೇಖನ ಬರೆದು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸುವ ಉತ್ಸಾಹ ಹೊಂದಿದವರು, ಹಲವಾರು ಪ್ರವಾಸಿ ಸ್ಥಳಗಳ ಭೇಟಿ ನೀಡಿ ಬರೆದ ಲೇಖನಗಳನ್ನೆಲ್ಲ ಸೇರಿಸಿ ಸುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ. ನಮಗೆ ಅಷ್ಟಷ್ಟು ಗೊತ್ತಿರುವ, ಗೊತ್ತಿಲ್ಲದಿರುವ ಊರು, ಕ್ಷೇತ್ರಗಳ ಬಗ್ಗೆ ಇಲ್ಲಿ ಲೇಖನಗಳಿವೆ. ಪರಿಚಯಾತ್ಮಕ ವಿವರಣೆಯ ಜೊತೆಯಲ್ಲಿಯೇ ಅಲ್ಲಿನ ಸಾಂಸ್ಕೃತಿಕ ಹಿನ್ನೆಲೆ, ಪೌರಾಣಿಕ ಐತಿಹ್ಯಗಳನ್ನೂ ದಾಖಲಿಸಿದ್ದಾರೆ. ಅಲ್ಲಲ್ಲಿ ಗೈಡುಗಳಂತೆ ಹೇಗೆ ತಲುಪಬೇಕು, ಎಲ್ಲಿ ಉಳಿಯಬಹುದು ಮತ್ತು ಆ ಸ್ಥಳದ ವೈಶಿಷ್ಟ್ಯತೆ ಸ್ಥಳ ಪುರಾಣಗಳ ಕುರಿತು ಮಾಹಿತಿಯನ್ನು ಸೇರಿಸಿದ್ದಾರೆ. ಪ್ರವಾಸದ ಉತ್ಸಾಹದವರಿಗೆ, ಮನೆಯಲ್ಲಿಯೇ ಕಳಿತು ಕ್ಷೇತ್ರಗಳ ಬಗ್ಗೆ ತಿಳಿಯುವ ಆಸಕ್ತರಿಗೆ ಉಪಯೋಗವಾಗಬಲ್ಲ ಪುಸ್ತಕ ಇದು. ಸಂತೋಷ್ ರಾವ್ ಅವರು ಅಭಿವೃದ್ಧಿಯಲ್ಲಿ ತೊಡಗಿರುವವರು, ಹಳ್ಳಿಗಳ, ದೇಶದ ಬಗ್ಗೆ ಅರ್ಥ ಮಾಡಿಕೊಳ್ಳಬಲ್ಲ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು. ಅವರ ಈ ದಾಖಲಾತಿ ಮತ್ತು ಬರವಣಿಗೆಯ ಶಕ್ತಿಯು ಹಳಿಗಳ ಜೀವನದ, ಸಮಸ್ಯೆಗಳ ಪರಿಹಾರಗಳ ಒಳನೋಟಗಳನ್ನು ಹಾಗೂ ಜನಕೇಂದ್ರಿತ ವಿಚಾರಗಳನ್ನು ದಾಖಲಿಸಬಲ್ಲದು ಎಂಬುದನ್ನು ಅವರಿಗೆ ನೆನಪಿಸುತ್ತೇನೆ, ಅಂತಹ ಅಭಿವೃದ್ಧಿಯ ಒಳನೋಟಗಳನ್ನು ಕಾಣಿಸುವ ಪುಸ್ತಕಗಳನ್ನು ಅವರು ಬರೆಯುವಂತಾಗಲಿ ಎಂದು ಹಾರೈಸಿದ್ದಾರೆ.
©2024 Book Brahma Private Limited.