ಪರಶುರಾಮ

Author : ಕಯ್ಯಾರ ಕಿಞ್ಣಣ್ಣ ರೈ

Pages 90

₹ 15.00




Year of Publication: 1974
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ಪರಶುರಾಮ ಪುರಾಣ ಪುರುಷರ ಜೀವನಗಾಥೆಯ ಪುಸ್ತಕವನ್ನು ಲೇಖಕ ಕೈಯ್ಯಾರ ಕಿಞ್ಣಣ್ಣ ರೈ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಪರಶುರಾಮ-ಕೊಡಲಿಯ ರಾಮ ದುಷ್ಟರಿಗೆ, ಅಹಂಕಾರಿಗಳಿಗೆ ಯಮ ಸ್ವರೂಪಿ. ಇಪ್ಪತ್ತೊಂದು ಬಾರಿ ಭೂಮಿಯನ್ನು ಪ್ರದಕ್ಷಿಣೆ ಮಾಡಿ ದುಷ್ಟರನ್ನು ಸದೆಬಡಿದ. ಭೀಷ್ಮ, ದ್ರೋಣರ ಗುರು. ಇವರನ್ನು ವಿಷ್ಣುವಿನ ಅವತಾರ, ಚಿರಂಜೀವಿ ಎಂಬ ನಂಬಿಕೆ ಇದೆ. ಈ ನಂಬಿಕೆಯ ಸುತ್ತಲೂ ಇಲ್ಲಿನ ಜೀವನ ಕಥೆಯು ವಿಮರ್ಶಾತ್ಮಕ ರೀತಿಯಲ್ಲಿ ಸಾಗುತ್ತದೆ. ಪರುಶರಾಮನ ಕೋಪ ಮತ್ತು ತಾಳ್ಮೆ ಎರಡನ್ನೂ ಲೇಖಕರು ಈ ಕೃತಿಯಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.

About the Author

ಕಯ್ಯಾರ ಕಿಞ್ಣಣ್ಣ ರೈ
(08 June 1915 - 09 August 2015)

 ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈ, ಅಖಿಲಭಾರತ ಮಟ್ಟದಲ್ಲಿ ಜರುಗಿದ 66 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ 1915ರ ಜೂನ್ 8 ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ. ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕೇರಳ ಸಂಗೀತ ನಾಟಕ ಆಕಾಡೆಮಿಯ ಸದಸ್ಯರೂ ಆಗಿದ್ದರು. ಅಲ್ಲದೆ ಕಾಸರಗೋಡು ತಾಲೂಕನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಲು ಸಹ ಹೋರಾಟ ಮಾಡಿದವರು.. ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನು ರಚಿಸಿದ್ದಾರೆ. ಕಾರ್ನಾಡ ಸದಾಶಿವರಾವ, ...

READ MORE

Related Books