ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ತೆಲುಗು ಮೂಲದ ಲೇಖಕ ಸಲೀಂ ಅವರ ‘ಆಪರೇಷನ್ ಕೈಟಿನ್’ ಮಕ್ಕಳ ಕಾದಂಬರಿಯನ್ನು ಲೇಖಕ ಧನಪಾಲ ನಾಗರಾಜಪ್ಪ ನೆಲವಾಗಿಲು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ತೆಲುಗು ಅಸೋಷಿಯೇಶನ್ ಆಫ್ ನಾರ್ತ್ ಅಮೆರಿಕ (ತಾನಾ) ಸಂಸ್ಥೆಯಿಂದ ಈ ಕೃತಿಗೆ ‘ಮಕ್ಕಳ ಉತ್ತಮ ಪುಸ್ತಕ ಪ್ರಶಸ್ತಿ’ ಲಭಿಸಿದೆ.
ಶಿವರಾಮ್ ಕಾನ್ ಸೇನ್ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಈ ಕಾದಂಬರಿಯು ಮಕ್ಕಳಲ್ಲಿ ವೈಜ್ಞಾನಿಕ ವಿಚಾರಗಳನ್ನು ತುಂಬುತ್ತದೆ. ಕರೊನಾ, ಎಬೋಲಾ, ಸಾರ್ಸ್ ಇಂತಹ ವೈರಾಣುಗಳು ಏನೂ ಮಾಡಲಾರವು. ಎಲ್ಲ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರವಿದೆ ಎಂಬುದನ್ನು ಸಾಬೀತುಪಡಿಸುತ್ತದೆ-ಕೈಟಿನ್. ವಯೋಮಾನದ ಹಂಗಿಲ್ಲದೇ ಎಲ್ಲರೂ ಓದಬಹುದು. ಸಂಶೋಧನಾಸಕ್ತಿಯ ಪ್ರತಿಭೆಗಳಿಗೆ ವೈಜ್ಞಾನಿಕ, ಮಾನವೀಯತೆ ಸೇರಿಬಿಟ್ಟರೆ ಯಾವುದೇ ಮೂಢನಂಬಿಕೆಗಳು ದ್ವೇಷ ಅಶಾಂತಿಗೆ ಅವಕಾಶವೇ ಇರುವುದಿಲ್ಲ ಎಂಬುದನ್ನು ಈ ಕಾದಂಬರಿ ಸಾರಿ ಹೇಳುತ್ತದೆ. ಅನ್ಯಗ್ರಹಗಳ ಪ್ರತಿನಿಧಿಗಳೊಂದಿಗೆ ವ್ಯವಹರಿಸುವಾಗಲೂ ಸ್ನೇಹ-ಗೌರವ-ವಿಶ್ವಾಸ ಕಾಪಾಡಿಕೊಳ್ಳುವ ಅಗತ್ಯವಿರುತ್ತದೆ. ಭೂಮಿಯ ಮೇಲಿರುವ ನಾವೆಲ್ಲರೂ ಪರಸ್ಪರ ವಿಶ್ವಾಸದೊಂದಿಗೆ ಇರಬೇಕು. ಆಗಲೇ ವಸುಂಧರೆ ಸುಂದರ ಎಂಬ ಸಂದೇಶದೊಂದಿಗೆ ಮಕ್ಕಳ ಕುತೂಹಲ ಕೆರಳಿಸುತ್ತ ಸಾಗುವ ಕಾದಂಬರಿ ಇದು’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.