ಖ್ಯಾತ ಲೇಖಕ ಹಾಗೂ ನಟ-ನಿರ್ದೇಶಕ ಎಸ್.ಎನ್. ಸೇತುರಾಮ್ ಅವರ ಎರಡು ನಾಟಕಗಳ ಸಂಕಲನ-ನಿಮಿತ್ತ ಗತಿ. ನಿಮಿತ್ತ ಒಂದು ನಾಟಕ ಹಾಗೂ ಗತಿ ಮತ್ತೊಂದು ನಾಟಕ. ಮದ್ಯ ವ್ಯಸನಿ ಪತಿಯೊಡನೆ ಬದುಕು ಸವೆಸುವ ಪತ್ನಿಯ ದಾರೂನ ಬದುಕಿನ ಚಿತ್ರಣವಿದು. ನಂತರ ಆತ ರೋಗ ಬಂದು ನೆಲಕ್ಕೆ ಬಿದ್ದಾಗ ಅವಳು ನಡೆದುಕೊಳ್ಳುವ ಪರಿ ಬದುಕಿನ ಹೊಸದೊಂದು ಆಯಾಮವನ್ನೇ ತೋರುತ್ತದೆ. ಸಂಭಾಷಣೆಗಳು ತುಂಬಾ ಪರಿಣಾಮಕಾರಿಯಾಗಿವೆ. ನಿಮಿತ್ತ ನಾಟಕವು ಗುಲಬಗಾ ವಿ.ವಿ. ವಿದ್ಯಾರ್ಥಿಗಳಿಗೆ ಪಠ್ಯವಾಗಿತ್ತು.
ಎಸ್. ಎನ್. ಸೇತುರಾಂ ಅವರು ಹುಟ್ಟಿದ್ದು ಹಾಸನ ಜಿಲ್ಲೆಯ ಶಂಕ ಗ್ರಾಮದಲ್ಲಿ. 1953ರ ಜನೆವರಿ 23 ರಂದು ಜನನ. ಬಿ.ಎಸ್.ಸಿ ಪದವೀಧರರು. ರಷ್ಯನ್ ಸಾಹಿತ್ಯ ಕುರಿತು ಹೆಚ್ಚಿನ ಓದು. ಅಂಚೆ ಇಲಾಖೆಯಲ್ಲಿ ಸೇವೆ, 1976 ರಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿ ಸೇವೆ, 2007 ರಲ್ಲಿ ಡೆಪ್ಯೂಟಿ ಕಮೀಷನರಾಗಿ ಸ್ವಯಂ ನಿವೃತ್ತಿ ಪಡೆದರು. ನಂತರ ಆದಾಯ ತೆರಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1981 ರಿಂದ ಹವ್ಯಾಸಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯವಾದರು. ಮಾಯಾಮೃಗ, ಮನ್ವಂತರ, ಮುಕ್ತ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಮಂಥನ, ದಿಬ್ಬಣ ಮತ್ತು ಅನಾವರಣ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ .ನಿಮಿತ್ತ, ಗತಿ, ಅತೀತ-ನಾಟಕಗಳು. 'ನಿಮಿತ್ತ' ನಾಟಕವು ...
READ MORE