ಡಾ,ಎಸ್ ಎಂ ಹಿರೇಮಠ ಅವರು ಬರೆದ ಅಧ್ಯಯನ ಗ್ರಂಥ ನಿಜಶರಣ ಅಂಬಿಗರ ಚೌಡಯ್ಯ ವಚನ-ನಿರ್ವಚನ. ಅಂಬಿಗರ ಚೌಡಯ್ಯ ಹನ್ನೆರಡನೆಯ ಶತಮಾನದ ಕನ್ನಡ ನಾಡಿನ ನೆಲೆಯಿಂದ ಅಲ್ಪಾವಧಿಯಲ್ಲಿಯೇ ಅವತರಿಸಿ ಬಂದ ಅಸಂಖ್ಯಾತ ಶಿವಶರಣರ ಕ್ರಾಂತಿಯು ವಿಶ್ವವನ್ನೇ ತನ್ನೆಡೆಗೆ ನೋಡುವಂತೆ ಮಾಡಿತು. ಸಂಘರ್ಷದ ಬದುಕನ್ನೇ ಆಯ್ಕೆ ಮಾಡಿಕೊಂಡಿದ್ದ ಹಲವಾರು ಶಿವಶರಣರು ಈ ಕ್ರಾಂತಿಯ ಕರ್ಣದಾರತ್ವವನ್ನು ವಹಿಸುದುದರ ಕಾರಣದಿಂದ, ಪರಾಂಪರಾಗತವಾಗಿ ಆವರೆಗೂ ನಡೆದುಕೊಂಡು ಬಂದಿದ್ದ ಸಾಮಾಜಿಕ ದಾರ್ಮಿಕ ಸಾಂಸ್ಕೃತಿಕಾದಿ ಕ್ಷೇತ್ರಗಳೆಲ್ಲ ವಿನೂತನವಾದ ಧೋರಣೆಗಳನ್ನು ತಾಳುವಂತಾಯಿತು .ಆ ಧೋರಣೆಗಳ ಅಪೂರ್ವವಾದುದರಿಂದ ಜಾಗತಿಕ ಪ್ರಾಜ್ಞಾರೆಲ್ಲ ಬೆರಗು ಕಣ್ಣಿಂದ ಬಸವಾದಿ ಶಿವಶರಣರ ಜೀವನ ಸಾದನೆಗಳೆಡೆಗೆ ನೋಡುವುದು ಅನಿವಾರ್ಯವೇ ಆಯಿತು. ನೇರ ನಡೆಯ,ದಿಟ್ಟ ನಿಲುವಿನ,ನಿಷ್ಠುರ ನುಡಿಯ,ಯಾರ ಮುಲಾಜಿಗೂ ಒಳಗಾಗದಿರುವ ಅಂಬಿಗರ ಚೌಡಯ್ಯ ನಂತಹ ಶರಣ ಶಕ್ತಿಗಳಿಂದ ಶರಣ ಕ್ರಾಂತಿಯು ಮತ್ತಷ್ಟು ಬಲವನ್ನು ಪಡೆದುಕೊಂಡಿತು.ಈ ಕುರಿತು ಅನೇಕ ಮಾಹಿತಿಗಳು ಕೃತಿಯಲ್ಲಿವೆ.
©2024 Book Brahma Private Limited.