ನೆರಳು ಮರದ ಧ್ಯಾನ ಅಪ್ಪಗೆರೆ ಸೋಮಶೇಖರ್ ಅವರ ಕೃತಿಯಾಗಿದೆ. ಸಾಮಾಜಿಕ ಪರಿವರ್ತನೆ ಎಂದರೆ, ಸಮಾಜದಲ್ಲಿರುವ ವ್ಯಕ್ತಿತ್ವಗಳ ಮಾನಸಿಕ ಪರಿವರ್ತನೆ ಎಂದರ್ಥ. ಮಾನಸಿಕ ಪರಿವರ್ತನೆಯಾಗದ ಹೊರತು ಸಾಮಾಜಿಕ ಪರಿವರ್ತನೆ ಅಸಾಧ್ಯ ಯಾವುದೇ ಸಾಮಾಜಿಕ ವ್ಯವಸ್ಥೆ ಎಂಬ ಬಗೆಯ ವ್ಯಕ್ತಿತ್ವಗಳನ್ನು ಪ್ರಭಾವಿಸುತ್ತದೆ. ಹಾಗೆ ನಿರ್ಮಾಣಗೊಂಡ ಕೆಲವು ಮಾದರಿ ವ್ಯಕ್ತಿತ್ವಗಳು ತನ್ನನ್ನು ರೂಪಿಸಿದ ಸಮಾಜದ ಪರಿವರ್ತನೆಗೂ ಕಾರಣವಾಗುತ್ತವೆ .
ರಾಮನಗರ ಜಿಲ್ಲೆಯ, ಚನ್ನಪಟ್ಟಣ ತಾಲ್ಲೂಕಿನ, ಅಪ್ಪಗೆರೆ ಗ್ರಾಮದ ಡಾ. ಅಪ್ಪಗೆರೆ ಸೋಮಶೇಖರ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿಯನ್ನು 7ನೇ ರಾಂಕ್ ಪಡೆದು ಪಾಸಾದವರು. ’ಡಾ. ಸಿದ್ದಲಿಂಗಯ್ಯ ಅವರ ಜೀವನ ಮತ್ತು ಸಾಹಿತ್ಯ : ಒಂದು ಅಧ್ಯಯನ” ಎಂಬ ವಿಷಯ ಕುಳಿತು ಸಂಶೋಧನೆ ನಡೆಸಿ, 2008ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ನಡೆವ ನಡೆ (ವಿಮರ್ಶೆ), ಮೌನ ಮಾತು ಪ್ರತಿಭಟನೆ (ವಿಮರ್ಶೆ), ಡಾ. ರಾಜಕುಮಾರ್, ಸುಟ್ಟಾವು ಬೆಳ್ಳಿ ಕಿರಣ (ವಿಮರ್ಶೆ), ತನು ಮುಟ್ಟದ ಮುನ್ನ(ವಿಮರ್ಶೆ), ಸಂಬಜ ಅನ್ನೋದು ದೊಡ್ಡದು ಕನಾ, ಬಡವರ ನಗುವಿನ ಶಕ್ತಿ ...
READ MORE