ಲೇಖಕಿ ಶ್ವೇತಾ ಪ್ರಕಾಶ್ ಅವರ ಲೇಖನ ಸಂಕಲನ ನೆನಪಿನ ಜಗುಲಿಯಲ್ಲಿ,ಭಾವನೆಗಳ ಮೆರವಣಿಗೆ . ಈ ಕೃತಿಯಲ್ಲಿ 1970-1980 ರ ಕಾಲಘಟ್ಟದ ಸಾಮಾಜಿಕ ಪರಿಸ್ಥಿತಿಗಳ ಚಿತ್ರಣವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಕೌಟುಂಬಿಕ ಜೀವನದ ಚಿತ್ರಣವೆನ್ನಿಸದೆ ನಾವ ಅಂದು ಸಮಾಜದಲ್ಲಿ ನೋಡಿದ ಪರಿಸರವೇ ಇದು ಎನ್ನುವ ಭಾವನೆ ಓದುಗರಲ್ಲಿ ಮೂಡಿಸುತ್ತದೆ.
ಬಸವೇಶ್ವರ ಪದವಿ ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೆೃಸೂರು ಮಾನಸ ಗ೦ಗೋತ್ರಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ ಎ ಶಿಕ್ಷಣವನ್ನು ಪೂರೈಸಿದವರು. ಹವ್ಯಾಸಿ ಬರಹಗಾತಿ೯ಯಾಗಿರುವ ಇವರು ಹತ್ತಾರು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡವರೂ ಹೌದು. ಅಕ್ಕಮಹಾದೇವಿ ಪ್ರಶಸ್ತಿ (2018), ಕರುನಾಡ ಹಣತೆ ಸಾಧಕ ರತ್ನ( 2019), ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ (2021-22), ಝಾನ್ಸಿ ರಾಣಿ ಲಕ್ಷ್ಮೀಬಾಯಿ ಪ್ರಶಸ್ತಿ(2020), ಬಸವ ಸೇವಾ ರತ್ನ ಪ್ರಶಸ್ತಿ( 2022), ಸಾಹಿತ್ಯ ರತ್ನ(2021) ಸಂಪದ ಸಾಹಿತ್ಯ (2022) ಏಷ್ಯ ವೇದಿಕ್ ಕಲ್ಚರಲ್ ರಿಸರ್ಚ್ ಯೂನಿವರ್ಸಿಟಿ ಸಮಾಜಸೇವೆ ಮತ್ತು ಉದಯೋನ್ಮುಖ ಬರಹಗಾತಿ೯ಗಾಗಿ 3.2.2022 ರ೦ದು ಗೌರವ ಡಾಕ್ಟರೇಟ್ ...
READ MORE