‘ನನ್ನ ಓದಿನ ಪರೀಕ್ಷೆ’ ಕೃತಿಯು ಕೆ.ಎನ್. ಭಗವಾನ್ ಅವರ ಸಂಪಾದಿತ ಲೇಖನಗಳ ಸಂಗ್ರಹವಾಗಿದೆ. ಈ ಕೃತಿಯು 18 ಅಧ್ಯಾಯಗಳನ್ನು ಒಳಗೊಂಡಿದ್ದು, ‘ದೇಶ ಸುತ್ತಿದ’ ಚೆಂಗೂಲಿ ಚೆಲುವನ ಭಾಷೆ, ‘ಅಳಿದ ಮೇಲೆ’ ಉಳಿಯುವುದು?, ಅಮರ ಚೇತನ-ಒಂದು ಅವಲೋಕನ, ನಾಲ್ಕು ನಾಲ್ಕು= ಒಂದು, ‘ಕಾಗದದ ಹೂ-ನ ಲವಲವಿಕೆ, ತಾಜಾತನ, ಹುಲಿಯೂರಿನ ಸರಹದ್ದು, ಜಾತಿ ಸಂಘರ್ಷಗಳ ದುರಂತ ಚಿತ್ರಣ- ‘ದಾಟು’, ‘ಟೆಂಟ್ ಸಿನಿಮಾ’ದಲ್ಲಿ ‘ದ್ರಾಮುಖ’ ರಾಟಗಳ ಬೆತ್ತಲುಠ!, ಕತ್ತಲ ಗರ್ಭ- ‘ಸಾವುಗಳ ಸಂಬಂಧ ಮಾಲೆ’, ಸರಳ ಸಂವೇದನೆಗೆ ‘ಕಾವ್ಯ ಕಲ್ಯಾಣಿ’, ‘ಆಸ್ವಾದನೆಯ ಅಭಿವ್ಯಕ್ತಿಗಳು, ‘ಗೋಕೃ’ ಅವರ ಸಾರ್ಥಕ ನಾಟಕಗಳು, ‘ಮಾರುತ ಸಖ’ - ಭಾರತೀಯ ವಿಮಾನ ವಿಜ್ಞಾನದ ಹುಡುಕಾಟ, ಬಾನ ‘ಯಾನ; ದಲ್ಲಿ ಬ್ರಹ್ಮಾಂಡ-ಪಿಡಾಂಡಗಳ ಸಮೀಕರಣ, ನಮ್ಮ ಮನೆಯ ಬೆಳಕು, ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ?, ಪ್ರಾಧಿಕಾರದ ಪ್ರಕಟಣೆಗಳು- ಒಂದು ಅವಲೋಕನ, ಐತಿಹಾಸಿಕ ಮಹತ್ವದ ‘ದೇವದಾಸಿ’ ಇವೆಲ್ಲವುಗಳನ್ನು ಒಳಗೊಂಡಿದೆ.
ಲೇಖಕ ಕೆ.ಎನ್. ಭಗವಾನ್ ಅವರು (ಜನನ: 1942, ಜೂನ್ 9 ) ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕ್ಯಾಶಾವಾರ ಗ್ರಾಮದವರು. ಹುಟ್ಟೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ, ಅಕ್ಕರಾಂಪುರದಲ್ಲಿ ಮಾಧ್ಯಮಿಕ ಶಿಕ್ಷಣ ಮತ್ತು ಮಧುಗಿರಿಯಲ್ಲಿ ಪ್ರೌಢಶಾಲಾ ಶಿಕ್ಷಣ, ನಂತರ, ತುಮಕೂರಿನ ಪಾಲಿಟೆಕ್ನಿಕಲ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಪದವಿ ಪಡೆದರು. ದೆಹಲಿಯ ಏರೋನಾಟಿಕ್ ಸೊಸೈಟಿ ಆಫ್ ಇಂಡಿಯಾದಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ ಪಡೆದರು. ಮೈಸೂರು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯಲ್ಲಿ ಮೇಲ್ವಿಚಾರಕರಾಗಿ ಉದ್ಯೋಗಕ್ಕೆ ಸೇರಿದರು. ಎಚ್. ಎ. ಎಲ್ ಸಂಸ್ಥೆಯಲ್ಲಿ ಅಧಿಕಾರಿಗಳಾಗಿ 37 ವರ್ಷ ದೀರ್ಘಕಾಲ ...
READ MORE