ನದಿಯೊಂದು ನಿದ್ರಿಸಿದಾಗ ರವಿ ಹಂಪಿ ಅವರ ಅನುವಾದಿತ ಕಾದಂಬರಿ ಕೃತಿಯಾಗಿದೆ. ಈ ಕಾದಂಬರಿಯ ಮನುಷ್ಯ ಲೋಕವು ಪ್ರಕೃತಿಯ ಸಹಜ ಲಯ, ಏರಿಳಿತಗಳನ್ನು ತಮ್ಮ ಮಾರ್ಗದರ್ಶಕರಾಗಿ ಮಾಡಿಕೊಂಡಿದೆ. ತುರಚಿ ಗಿಡದ ಮುಳ್ಳು ಚುಚ್ಚಿ ಆದ ಗಾಯಕ್ಕೆ ಕಾಡುಜೇನುತುಪ್ಪ ಹಚ್ಚಿದರೆ ಬೇಗ ಮಾಯುತ್ತದೆ, ಮಾಚಿಪತ್ರೆ ಗಿಡದ ಎಲೆಯ ರಸ ಗಾಯಕ್ಕೆ ಒಳ್ಳೆಯದು, ಇನ್ಯಾವುದೋ ಎಲೆಯ ರಸ ರಕ್ತ ಸೋರುವುದನ್ನು ನಿಲ್ಲಿಸಲು ರಾಮಬಾಣ, ಜ್ವರ ಬಂದಾಗ ಯಾವ ಔಷಧೀಯ ಸಸ್ಯ ಬಳಸಬೇಕು, ಯಾವ ಬೇರನ್ನು ಹಸಿಯಾಗಿ ಸೇವಿಸಬೇಕು, ಯಾವುದನ್ನು ಕುಟ್ಟಿ ರಸ ಕುಡಿಯಬೇಕು ಇತ್ಯಾದಿಗಳಿಂದ ಹಿಡಿದು, ಕಾಡಿನಲ್ಲಿ ಅಡಗಿಕೊಂಡಾಗ ತಮ್ಮ ಇರವಿನ ರಹಸ್ಯವನ್ನು ಬಿಟ್ಟುಕೊಡದಂತೆ ಇರುವುದು ಹೇಗೆ, ಯಾವ ಮರದ ಕೆಳಗೆ ಯಾವ ಸೊಪ್ಪು ಬೆಳೆದಿರುತ್ತದೆ ಎಂಬಂತಹ ನೂರಾರು ಪ್ರಾಕೃತಿಕ ವಿಸ್ಮಯಗಳು ಬಹಳ ಸಹಜ ಅನ್ನುವ ಹಾಗೆ ಕಾದಂಬರಿಯ ಪ್ರತಿಯೊಂದು ಪುಟದಲ್ಲಿಯೂ ಕಾಣಿಸುತ್ತವೆ.
©2024 Book Brahma Private Limited.