ಲೇಖಕಿ ನೀಳಾದೇವಿಯವರ ಸಾಮಾಜಿಕ ಕಾದಂಬರಿಯ ಮೂಕ ರಾಗ. ವೈಶಾಲಿ ಕಾಸರವಳ್ಳಿಯವರ ದಿಗ್ದರ್ಶನದಲ್ಲಿ ಧಾರಾವಾಹಿಯಾಗಿ ಪ್ರಸಾರವಾದ ಕಾದಂಬರಿಯಿದು. ಕಥಾನಾಯಕಿ ಅನೂರಾಧ ಕುರುಡಿ ಮತ್ತು ಮೂಗಿ. ಎಳೆಯ ಮಗುವಿದ್ದಾಗಲೆ ತಾಯಿಯನ್ನು ಕಳೆದುಕೊಂಡು, ಮಲತಾಯಿಯ ಕಾಟ ಸಹಿಸಿ ಬೆಳೆದವಳು. ಮಿತವಾದ ಆದಾಯ, ಮನೆ ತುಂಬಾ ಮಕ್ಕಳು, ಬಡತನದ ಬೇಗೆ ಇವುಗಳಿಂದ ಅವಳ ತಂದೆಯೂ ಸೋತುಹೋಗಿದ್ದರು. ಮಗಳು ಅನೂರಾಧಳ ಕಿವಿಯ ಚಿಕಿತ್ಸೆ ಮತ್ತು ಮಾತಾಡುವ ತರಬೇತಿ ಕೊಡಿಸುವ ಕಡೆಗೆ ಹೆಚ್ಚು ಗಮನ ಕೊಡಲು ಅವರಿಂದ ಸಾಧ್ಯವಾಗಲಿಲ್ಲ ಎಂಬಂತೆ ಕತೆ ಸಾಗುತ್ತದೆ.. ಈ ಪುಸ್ತಕದ ಕಥಾವಸ್ತು ಇಂದಿನ ಪರಿಸ್ಥಿತಿಯಲ್ಲಿ ಹೆಚ್ಚು ಆಕರ್ಷಣೀಯವೆನಿಸದಿದ್ದರೂ, 45 ವರ್ಷಗಳ ಹಿಂದೆ ಇದ್ದ ವೈದ್ಯಕೀಯ ಸೌಲಭ್ಯಗಳು ಮತ್ತು ಸಾಮಾಜಿಕ ವ್ಯವಸ್ಥೆಗಳ ಹಿನ್ನೆಲೆಯಲ್ಲಿ ನೋಡಿದರೆ ಲೇಖಕಿಯ ಉದ್ದೇಶ ಅರ್ಥವಾಗುತ್ತದೆ. ಮೂಕ ಹೆಣ್ಣಿನ ನೋವು, ಸಣ್ಣ ಮಕ್ಕಳೊಂದಿಗೆ ಸೇರಿ ವಿಶೇಷ ಮಕ್ಕಳ ಶಾಲೆಯಲ್ಲಿ ಮಾತು ಕಲಿಯಲು ಮಾಡುವ ಅವಳ ಪ್ರಯತ್ನ, ಮದುವೆಯಾಗಿ ಸಂಸಾರಸ್ಥಳಾಗಬೇಕೆಂಬ ಹಂಬಲ ಇತ್ಯಾದಿ ವಿಷಯಗಳನ್ನು ಚೆನ್ನಾಗಿ ಬರೆದಿದ್ದಾರೆ. ಆದರೆ ವಯಸ್ಸಿಗೆ ಬಂದಿದ್ದ ಹೆಣ್ಣು ಮಗಳನ್ನು, ಅದರಲ್ಲೂ ಕಿವುಡಿ ಮತ್ತು ಮೂಕಳಾಗಿದ್ದವಳನ್ನು ಸೋದರತ್ತೆಯ ಅವಿವಾಹಿತ ಮಗನೊಂದಿಗೆ ಇರಲು ವಿದೇಶಕ್ಕೆ ಕಳಿಸಲು ಆಗಿನ ಹಿರಿಯರು ಒಪ್ಪುತ್ತಿದ್ದರೇ ಎಂಬ ಪ್ರಶ್ನೆ ಇಂದಿನ ಓದುಗನ ತರ್ಕಕ್ಕೆ ಸಿಲುಕುತ್ತದೆ. ಪ್ರಥಮ ಮುದ್ರಣ 1975, ದ್ವಿ.ಮುದ್ರಣ 2007
ಕನ್ನಡದ ಹಿರಿಯ ಲೇಖಕಿ ಬಾಲ್ಯದಲ್ಲೇ ಸಾಹಿತ್ಯ ರಚನೆಯಲ್ಲಿ ತೊಡಗಿದವರು ನೀಳಾದೇವಿಯವರು 1932 ಆಗಸ್ಟ್ 22 ರಂದು ಮೈಸೂರಿನಲ್ಲಿ ಜನಿಸಿದರು. ಇವರ ಪ್ರಥಮ ಕತೆ “ಅಪ್ಪಾ ನಾನೂ ಬರ್ತಿನಪ್ಪಾ" ತಾಯಿನಾಡು ಪತ್ರಿಕೆಯಲ್ಲಿ ಪ್ರಕಟವಾದಾಗ ಇವರಿಗೆ 15 ವರ್ಷ. ಕಾದಂಬರಿ, ಕಿರುಗತೆ, ಲಘುಹಾಸ್ಯ, ಶಿಶು ಸಾಹಿತ್ಯ, ನಾಟಕ, ಪ್ರವಾಸ ಕಥನ, ಅನುವಾದಗಳಲ್ಲಿ ಸಮರ್ಥವಾಗಿ ಕೈಯಾಡಿಸಿದ ಹಿರಿಯ ಕಿರುಗತೆಗಳ ಕತೆಗಾರ್ತಿ. ನೀಳಾದೇವಿ, ಅವರ ಅನೇಕ ಕಥಾ ಸಂಗ್ರಹಗಳೂ ಬಂದಿವೆ. ಒಟ್ಟು 40 ಗ್ರಂಥಗಳು. ‘ಬೇಡಿ ಬಂದವಳು’, ಇವರ ಒಂದು ಜನಪ್ರಿಯ ಕಾದಂಬರಿ. ಇದು ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಚಲನಚಿತ್ರವಾಗಿ ತೆರೆ ...
READ MORE