ಮಸ್ತ್ ಮಜಾ ಟ್ರಾಫಿಕ್ ಶಾಂತು ಸಜಿಪ ಅವರ ಕೃತಿಯಾಗಿದೆ. ನಗರದ ವಾಹನಗಳನ್ನು ನಿಯಂತ್ರಿಸುವುದೇ ದಿನಚರಿಯಾಗಿರುವ ಉದ್ಯೋಗ ಶಾಂತಪ್ಪನವರದ್ದು ಮನುಷ್ಯರನ್ನು ಗಮನಿಸುವುದು ಅವರ ಕರ್ತವ್ಯದ ಒಂದು ಭಾಗ, ಅದರಲ್ಲಿ ಸ್ವಾರಸ್ಯಕರವಾದುದನ್ನು ಹಕ್ಕಿ ತೆಗೆದಿಟ್ಟು ಲೇಖನಗಳ ರೂಪದಲ್ಲಿ ನೀಡಿದ್ದಾರೆ, ಯುವಕ ಯುವತಿಯರು ಧರಿಸುವ ಟೀ ಶರ್ಟ್‌ಗಳ ಮೇಲೆ ಮುದ್ರಿತವಾಗಿರುವ ವಿಚಿತ್ರ ಬರಹಗಳನ್ನು, ವಾಹನಗಳ ಮೇಲೆ ಬರೆದಿರುವ ಪದ ಪುಂಜಗಳನ್ನು ಗಮನಿಸುತ್ತಾರೆ, ನಂಬರ್ ಪ್ಲೇಟಿಗಿಂತಲೂ ಹೆಚ್ಚು ಉಪಯುಕ್ತ ವಾಗುವುದು ಕೆಲಬಾರಿ ಈ ಥರದ ಹೇಳಿಕೆಗಳು ಎನ್ನುತ್ತಾರೆ. ಚುರುಕಾದ ವಕ್ರ ತುಂಡೋಕ್ತಿಗಳೂ ಈ ಪುಸ್ತಕದ ಲೇಖನವೊಂದರಲ್ಲಿ ಲಭ್ಯವಿವೆ. ಎಲ್ಲವೂ ಸಾರಿಗೆ ನಿಯಮಗಳ ಕುರಿತಾಗಿವೆ. ಪ್ರಪಂಚದಲ್ಲಿ ಕಣ್ಣು ದಾನ ಮಾಡುವವರು ಸಾವಿರಾರು ಜನ ಇದ್ದಾರೆ. ಆದರೆ ತಲೆ ದಾನ ಮಾಡಿದವರಿಲ್ಲ. ಅದಕ್ಕೆ ಹೆಲೈಟ್ ಧರಿಸಿ, ಗೆಳೆತನದ ಪರಮಾವಧಿ ಎಂದರೆ ಒಂದೇ ಬೈಕಲ್ಲಿ ಮೂರು ಜನ ಹೋಗುವುದು . ಲೇಡೀಸ್ ಕಾಲೇಜು ಇರುವಲ್ಲಿ ರೋಡ್ ಹಂಪ್‌ಗಳ ಅಗತ್ಯವಿಲ್ಲ. ಹೀಗೆ ಈ ಕೃತಿ ಪೊಲೀಸರೊಬ್ಬರ ಮಾನವೀಯ ಮುಖದ ಅನಾವರಣ ಮಾಡುತ್ತದೆ. ಸಾಹಿತ್ಯಕವಾಗಿ ಇನ್ನಷ್ಟು ಬೆಳೆದು ಗಮನಾರ್ಹ ಕೃತಿ ರಚನೆ ಮಾಡುವ ಭವಿಷ್ಯ ಶಾಂತಪ್ಪನವರದಾಗಲಿ ಎಂದು ಹಾರೈಸುತ್ತೇನೆ. ಎಂದು ಪ್ರೊ. ಭುವನೇಶ್ವರಿ ಹೆಗಡೆ ಮಂಗಳೂರು ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಶಾಂತಪ್ಪ ಬಾಬು ಅವರು ದಕ್ಷಿಣ ಕನ್ನಡ ಜಿಲ್ಲೆಯ ಸಜಿಪಪಡುವಿನವರು. ಇವರು ಪ್ರಸ್ತುತ ಹೆಡ್ ಕಾಸ್ಸ್‌ಟೇಬಲ್ ,ಸ್ಟೇಟ್ ಇಂಟೆಲಿಜೆನ್ಸ್ ಬ್ಯುರೊ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ...
READ MORE