‘ಮರುಪಯಣ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಅನುಭವ ಕಥನವಾಗಿದೆ. ಮರುಪಯಣ ಕೃತಿಯ ಶೀರ್ಷಿಕೆಯಡಿ 21 ಅಧ್ಯಾಯಗಳಿದ್ದು, ನಾಂದಿ, ಒಮ್ಮತ, ಅನಾಥರಾದಾಗ, ಕಾರ್ಯವಿಧಾನ, ಅನ್ಯಾಯ, ರಾಣಿಯ ರಾಜ್ಯದಲ್ಲಿ, ಬೆಕ್ಕಿನ ಬೇರೆ ಬಿಡಾರ, ಕಣ್ಮೆರೆಯಾದ ಕೆರೆ, ಕರ್ನಲ್ ಹಿಲ್, ಹಿರೇಹಳ್ಳಿ, ಕಲೆಗಳ ಆಗರ, ಶರಾವತಿಯ ಸಾನ್ನಿಧ್ಯ, ದ್ವೀಪಗಳ ರಾಣಿ, ಹೊಸತು ಹೊಸತು, ಊರ ಹೊಲಸು, ಪರ್ಣ ಸಂಸ್ಕೃತಿ, ಮಾಯವಾದ ವನರಾಜಿ, ವೃತ್ತಿ ಜೀವನ, ಮತ್ಸ್ಯಾವತಾರ, ಉದ್ಯೋಗ ಪರ್ವ, ಮರುಪಯಣ ಇವೆಲ್ಲವನ್ನು ಒಳಗೊಂಡಿದೆ.
ಕೃತಿಯ ಹಿನ್ನಲೆಯನ್ನು ವಿಶ್ಲೇಷಿಸಿರುವ ಕೃಷ್ಣಾನಂದ ಕಾಮತರು, ಈ ಕೃತಿ ಕೇವಲ ನಡೆದ ಘಟನೆಗಳ ವರದಿಯಲ್ಲ. ಕಾಲ್ಪನಿಕ ಕಥನವೂ ಅಲ್ಲ. ನಡೆಯುತ್ತಲೇ ಇರುವ ಜೀವನ ವ್ಯಾಪಾರಗಳ ಮೌಲ್ಯಮಾಪನದ ಪ್ರಯತ್ನಗಳಾಗಿವೆ. ಮುಂದೆ ನಾವೆಲ್ಲರೂ ಎದುರಿಸಬೇಕಾಗಿ ಬರಲಿರುವ ಪೇಚುಗಳ ಎಚ್ಚರಿಕೆಯ ಮಾತಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವ್ಯಕ್ತಿಗಳು, ಸಮಾಜ, ಸರಕಾರಗಳೆಲ್ಲ ಒಟ್ಟಾಗಿಯೇ ಯೋಚಿಸಿ ನಿವಾರಣೋಪಾಯಗಳನ್ನು ಕೈಕೊಳ್ಳದಿದ್ದರೆ ತಕ್ಷಣವಲ್ಲದಿದ್ದರೂ ಮುಂಬರುವ ತಲೆಮಾರಿನವರು, ಎಡಬಿಡದೆ ನಡೆದು ಬಂದಿರುವ ಪರಿಸರ ನಾಶಕ್ಕಾಗಿ ಪ್ರಾಯಶ್ಚಿತ್ತ, ಅನುಭವಿಸಲೇಬೇಕಾಗಿ ಬರಬಹುದು. ಇದೊಂದು ವಸ್ತುಸ್ಥಿತಿಯ ಅಧ್ಯಯನವಾಗಿದ್ದರಿಂದ ಬರವಣಿಗೆಯಲ್ಲಿ ಬರುವ ಪಾತ್ರಗಳು ಕಥೆ ಕಾದಂಬರಿಯಲ್ಲಿಯಂತೆ ಕಾಲ್ಪನಿಕವಾಗಿಲ್ಲ’ ಎಂದಿದ್ದಾರೆ.
©2025 Book Brahma Private Limited.