ಮಲ್ಲಿಕಾರ್ಜುನ ಖರ್ಗೆ

Author : ಎಚ್.ಟಿ. ಪೋತೆ

Pages 94

₹ 100.00




Year of Publication: 2022
Published by: ಕುಟುಂಬ ಪ್ರಕಾಶನ
Address: ಪೂಜಾ ಕಾಲೋನಿ ಕುಸನೂರ ರಸ್ತೆ, ಕಲಬುರಗಿ- 585 106
Phone: 9449163751

Synopsys

ಮಲ್ಲಿಕಾರ್ಜುನ ಖರ್ಗೆ ಜೀವನ ಕಥನ ಎಚ್.ಟಿ. ಪೋತೆ ಅವರು ಬರೆದ ಜೀವನ ಚಿತ್ರವಾಗಿದೆ. ಈ ಕೃತಿಯು 6 ಅಧ್ಯಾಯಗಳನ್ನು ಒಳಗೊಂಡಿದೆ. ಕಾರ್ಮಿಕನ ಮಗನೊಬ್ಬ ದೇಶದ ಕಾರ್ಮಿಕ ಮಂತ್ರಿಯಾಗುವುದು ಅಷ್ಟು ಸುಲಭದ ಮಾತಲ್ಲ. ಮಲ್ಲಿಕಾರ್ಜುನ ಖರ್ಗೆಜಿಯವರ ಹೋರಾಟದ ನಡೆ ಗಮನಿಸಿದಾಗ ಅಂಬೇಡ್ಕರ್ ಅವರ ಹೋರಾಟದ ಹೆಜ್ಜೆಗಳಲ್ಲಿ ಹೆಜ್ಜೆ ಇಟ್ಟಿರುವಂತೆ ಭಾಸವಾಗುತ್ತದೆ. ಇಷ್ಟು ವರ್ಷಗಳ ಖರ್ಗೆಯವರ ಜೀವನ ಸಾಧನೆ, ಎತ್ತರದ ವ್ಯಕ್ತಿತ್ವ ನಮಗೊಂದು ಹೆಮ್ಮೆ ಮತ್ತು ಅಭಿಮಾನದ ಸಂಗತಿಯಾಗಿದೆ. ಕಳೆದ ನಾಲ್ಕು ದಶಕಗಳಿಂದ ಅವರನ್ನು ಸಮೀಪದಿಂದ ಕಂಡಿದ್ದೇನೆ, ಕಿರಿಯನಾಗಿ, ಅನುಯಾಯಿಯಾಗಿ ಒಡನಾಡಿದ್ದೇನೆ. ಅದರ ಪ್ರತಿಫಲವೇ ಮಲ್ಲಿಕಾರ್ಜುನ ಖರ್ಗೆಜಿಯವರ ಜೀವನದ ಸಂಕಥನ. ಅವರ ಸಾರ್ಥಕ ಸೇವೆಯನ್ನು ಅಕ್ಷರಕ್ಕಿಳಿಸುವ ಪ್ರಯತ್ನ ಮಾಡಿದ್ದೇನೆ. ಆನೆಯನ್ನು ಅಂಗೈ ಅಗಲ ಕನ್ನಡಿಯಲ್ಲಿ ತೋರಿಸುವ ಪ್ರಯತ್ನವಿದು. ಎಂದು ಲೇಖಕ ಎಚ್.ಟಿ. ಪೋತೆ ಪುಸ್ತಕದ ಬಗ್ಗೆ ಲೇಖಕರ ನುಡಿಯಲ್ಲಿ ತಿಳಿಸಿದ್ದಾರೆ.

About the Author

ಎಚ್.ಟಿ. ಪೋತೆ

ಕಥೆಗಾರ, ವಿಮರ್ಶಕ, ಅನುವಾದಕ, ಚಿಂತಕ, ಜಾನಪದ ವಿದ್ವಾಂಸ ಹಾಗೂ ಸಂಶೋಧಕರಾದ ಪ್ರೊ. ಎಚ್.ಟಿ.ಪೋತೆ ಬಿಸಿಲನಾಡಿನ ದಿಟ್ಟಪ್ರತಿಭೆ. ಬುದ್ದ. ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಬಿ. ಶ್ಯಾಮಸುಂದರ್ ಚಿಂತನೆಗಳ ನೆಲೆಯಲ್ಲಿ ಸಾಹಿತ್ಯ ಕೃಷಿಗೈದವರು. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಪೋತೆಯವರ ಜನ್ಮಸ್ಥಳ, ಗುಲ್ಬರ್ಗಾ ವಿವಿಯಿಂದ ಎಂ.ಎ, ಎಂ.ಫಿಲ್, ಪಿಎಚ್ಡಿ. ಅಂಬೇಡ್ಕರ್ ಕುರಿತಾದ ಕನ್ನಡದ ಮೊದಲ ಡಿ.ಲಿಟ್ ಪಡೆದ ಹೆಗ್ಗಳಿಕೆ. ಗುಲ್ಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ, ಪ್ರಸಾರಂಗದ ನಿರ್ದೇಶಕ, ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಕರ್ನಾಟಕ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಅವರದ್ದು ಬಹುರೂಪಿ ಶೈಕ್ಷಣಿಕ ...

READ MORE

Related Books