‘ಮಹಾಕಾವ್ಯ ಲಕ್ಷಣ’ ಹಿರಿಯ ಸಾಹಿತಿ ಟಿ.ವಿ. ವೆಂಕಟಾಚಲಶಾಸ್ತ್ರಿ ಅವರ ಕೃತಿ. ವಿಷ್ಣು ಧರ್ಮೋತ್ತರ ಪುರಾಣದಲ್ಲಿ ಇರುವಂತಹ ಮಹಾಕಾವ್ಯ ಲಕ್ಷಣದಿಂದ ವಾರ್ತಾಕವಿ ರಾಘವಯ್ಯನ ಲಕ್ಷಣದೀಪಿಕಾ ವರೆಗೂ ಇರುವ ಭಾರತೀಯ ಮಹಾಕಾವ್ಯಗಳ ಲಕ್ಷಣ ವಿವೇಚನೆ ಈ ಕೃತಿಯಲ್ಲಿದೆ. ದ್ರಾವಿಡ ಭಾಷೆಗಳಲ್ಲಿ ಕಿರಿಯದಾದ ತೆಲುಗು ಭಾಷೆಯ ಕಾವ್ಯ ಲಕ್ಷಣಗ್ರಂಥಗಳವರೆಗೂ ಕನ್ನಡ ಸಂಸ್ಕೃತ ಭಾಷೆಗಳನ್ನು ಒಳಗೊಂಡಂತೆ ಮಹಾಕಾವ್ಯ ಲಕ್ಷಣಗಳ ವಿವೇಚನೆ ಈ ಕೃತಿಯಲ್ಲಿದೆ. ಚಂಪುವಿನ ಲಕ್ಷಣದ ಉಲ್ಲೇಖ ವಿಶೇಷವಾದ ನೆರವುವನ್ನು ಈ ಕೃತಿಗೆ ನೀಡಿದೆ. ಮಹಾಕಾವ್ಯಗಳನ್ನೂ, ಮಹಾಕಾವ್ಯಗಳ ಲಕ್ಷಣವನ್ನು ವಿಮರ್ಶಿಸಿರುವ ಕೆಲವು ಗ್ರಂಥಗಳು, ಗ್ರಂಥಕಾರರು, ಅವರ ವಿಚಾರದ ವಿವೇಚನೆಯೂ ಈ ಕೃತಿಯಲ್ಲಿ ದೊರೆಯುತ್ತದೆ.
©2024 Book Brahma Private Limited.