ಈ ವರ್ತನೆಗಳು ನಿಮ್ಮಲ್ಲಿ ಎಷ್ಟಿವೆ? ವಿಚಾರ ಸರಣಿಯ ಭಾಗ-2ನೇ ಕೃತಿ ‘ಮಡದಿ ಮತ್ತೊಬ್ಬ ಚಲುವಗೆ’ ಡಾ. ಮೀನಗುಂಡಿ ಸುಬ್ರಮಣ್ಯ ಅವರು ರಚಿಸಿದ್ದು, ಮನುಷ್ಯನ ವರ್ತನೆಗಳನ್ನು ಇಲ್ಲಿ ಅವಲೋಕಿಸಲಾಗಿದೆ. ಈ ಕೃತಿಗೆ ಡಾ. ಪಿ.ಎಸ್.ಶಂಕರ್ ಪ್ರತಿಷ್ಠಾನದ ‘ವಿಶೇಷ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ’ (2002) ಲಭಿಸಿದೆ.
ಬಹುತೇಕ ವೇಳೆ ತಮಗೊಬ್ಬರಿಗೆ ಇಂತಹ ವಿಚಾರಗಳು ಬರುತ್ತವೆ ಎಂದು ಭಾವಿಸುತ್ತೇವೆ. ಆದರೆ, ನಿಮ್ಮ ಅನುಭವವು ಪ್ರತಿಯೊಬ್ಬರ ಅನಭವವೂ ಆಗಿರಲಿಕ್ಕೂ ಸಾಕು.ಇಲ್ಲಿ ಉಲ್ಲೇಖಿಸಿದ ಒಬ್ಬ ವ್ಯಕ್ತಿಯ ವರ್ತನೆಗಳು ತಮ್ಮಲ್ಲಿಯೂ ಇವೆ ಎಂದು ಭಾವಿಸುವಂತಿಲ್ಲ. ಪ್ರತಿ ವ್ಯಕ್ತಿಯ ಅನುಭವವೂ ವಿಶಿಷ್ಟ್ಯವೂ ಆಗಿರುತ್ತವೆ. ಇಂತಹ ವರ್ತನೆಗಳ ಚಿಂತನೆಗೆ ಪ್ರೇರೇಪಿಸುವ ಕೃತಿ ಇದು.
©2025 Book Brahma Private Limited.