ಲವ-ಕುಶ ಪುರಾಣ ಪುರುಷರ ಜೀವನಗಾಥೆಯ ಪುಸ್ತಕವನ್ನು ಲೇಖಕ ತ.ಸು. ಶಾಮರಾಯ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಲವ-ಕುಶರ ಕುರಿತಾಗಿ ಶ್ರೀರಾಮ-ಸೀತೆಯರ ಮಕ್ಕಳು. ಗರ್ಭಿಣಿಯಾದ ಸೀತಾದೇವಿಯನ್ನು ಶ್ರೀರಾಮನು ಕಾಡಿಗೆ ಕಳುಹಿಸಿದ. ಅನಂತರ ವಾಲ್ಮೀಕಿಯ ಆಶ್ರಮದಲ್ಲಿ ಹುಟ್ಟಿದರು. ಶ್ರೀರಾಮನ ಯಾಗದ ಕುದುರೆಯನ್ನು ಕಟ್ಟಿ ಹಾಕಿ ಲಕ್ಷ್ಮಣ, ಭರತ, ಶತ್ರುಘ್ನರನ್ನೆ ಅಲ್ಲದೆ ಶ್ರೀರಾಮನನ್ನೂ ಸೋಲಿಸಿದ ಬಾಲವೀರರು. ವಾಲ್ಮೀಕಿ ಋಷಿಗಳು ಹೇಳಿಕೊಟ್ಟ ರಾಮಾಯಣದ ಕಥೆಯನ್ನು ಶ್ರೀರಾಮನ ಮುಂದೆ ಹಾಡಿದರು ಎಂದು ಸುಂದರವಾಗಿ ಲೇಖಕರು ಕಥೆಯನ್ನು ಕೊಂಡೊಯ್ಯುತ್ತಾರೆ. ಲವ-ಕುಶರು ಶ್ರೇಷ್ಟ ಪುರುಷ ರಾಮನ ಮಕ್ಕಳಾದರೂ ಅವರಿಗೂ ಕಷ್ಟ ಕಾರ್ಪಣ್ಯಗಳು ತಪ್ಪಲಿಲ್ಲ. ಅದರೆ ವೀರಪುರುಷರಾಗಿ ಬೆಳೆದ ಸಹೋದರರು ತಮ್ಮ ತಂದೆಯ ಯಾರೆಂದು ತಿಳಿಯದೆ ಅವರ ವಿರುದ್ದವೇ ಹೋರಾಟಕ್ಕೆ ನಿಂತಾಗ ಎದುರಾಗುವ ಸನ್ನಿವೇಶಗಳನ್ನು ಈ ಕೃತಿಯಲ್ಲಿ ಶಾಮರಾಯರು ಸರಳ ಭಾಷೆಯಲ್ಲಿ ಚಿತ್ರಿಸಿದ್ದಾರೆ.
©2025 Book Brahma Private Limited.