ಲಕ್ಷ್ಮಣ ಪುರಾಣ ಪುರುಷರ ಜೀವನಗಾಥೆ ಪುಸ್ತಕವನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ರಾಮಾಯಣದ ಪ್ರಮುಖ ಪಾತ್ರವಾದ ಲಕ್ಷ್ಮಣನ ಜೀವನದ ಬಗೆಗೆ ವಿವರಿಸಲಾಗಿದೆ. ಕೃತಿಯಲ್ಲಿ ಲಕ್ಷ್ಮಣನ ಕುರಿತು ‘ತಮ್ಮನೆಂದರೆ ಹೀಗಿರಬೇಕು’ ಎನ್ನಿಸಿಕೊಳ್ಳುವ, ರಾಮಾಯಣದ ವಿಲಕ್ಷಣ ವ್ಯಕ್ತಿತ್ವ; ಅಸಾಮಾನ್ಯ ಶೂರ, ಕಾರ್ಯಧುರಂಧರ; ಸ್ವಂತಕ್ಕಾಗಿ ಏನನ್ನೂ ಬಯಸದೆ ಇಡೀ ಜೀವನವನ್ನು ತನ್ನ ಅಣ್ಣನ, ರಾಜನ, ರಾಜ್ಯದ ಸೇವೆಯಲ್ಲಿ ಸವೆಸಿದ ತ್ಯಾಗಿ. ನಿಷ್ಕಲ್ಮಶ ಮನಸ್ಸಿನ ವ್ಯಕ್ತಿತ್ವ /ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ ಎಂದರೆ ಅದಕ್ಕೆ ಕಾರಣ ಲಕ್ಷ್ಮಣನ ವ್ಯಕ್ತಿತ್ವ. ತನ್ನ ಅಣ್ಣ ಅತ್ತಿಗೆಗೋಸ್ಕರ ತನ್ನ ಹೆಂಡತಿಯಿಂದಲೂ ಹದಿನಾಲ್ಕು ವರ್ಷ ದೂರವಾಗಿ ಕಾಡು ಮೇಡಿನಲ್ಲಿ ಅಳೆದು ಯುದ್ಧಗೈದ ಅಪರೂಪದ ವ್ಯಕ್ತಿತ್ವ ಲಕ್ಷ್ಮಣನದ್ದು ಎಂದು ಲೇಖಕರು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ.
©2024 Book Brahma Private Limited.