ಲೇಖಕಿ ಚಂದ್ರಾವತಿ ಬಡ್ಡಡ್ಕ ಅವರ ಲಘು ಪ್ರಬಂಧ ಕೃತಿ ʻಲಘು ಬಿಗುʼ. ಮೂವತ್ತಕ್ಕೂ ಅಧಿಕ ಲಘು ಹಾಗೂ ಬಿಗು ಎರಡೂ ರೀತಿಯ ಬರಹಗಳು ಇಲ್ಲಿವೆ. ʻಅವಳ ಹಿಂದೆ ನೀನು ನಡೆದು..ʼ, ʻಅವ್ವಾ, ಸ್ವರ್ಗಕ್ಕೆ ಹೋಗಿʼ, ʻಅರ್ಥವೇ ಆಗದಿದ್ದ ಅಪ್ಪನೆಂಬ ಆಕಾಶʼ ಮುಂತಾದ ಶೀರ್ಷಿಕೆಗಳ ಬರಹಗಳಿವೆ. ಇಲ್ಲಿ ಇತರರ ಕುರಿತಾದ ವ್ಯಂಗ್ಯವಿಲ್ಲ, ಬದಲಾಗಿ ಚಂದ್ರಾವತಿಯವರು ತನ್ನನ್ನೇ ತಾನು ತಮಾಷೆಗೆ ಒಡ್ಡಿಕೊಳ್ಳುವ ಆತ್ಮ ವಿಮರ್ಶಾತ್ಮಕ, ವಿನೋದಪೂರ್ಣವೂ ಆದ ನಿಲುವು ಇದೆ. ಅಡುಗೆಮನೆಯ ತುರಿಮಣೆಯಿಂದ ಹಿಡಿದು ದೇಶದ ರಾಜಕೀಯದವರೆಗೂ ಇಲ್ಲಿನ ಬರಹಗಳು ಚಾಚಿಕೊಂಡಿವೆ.
©2025 Book Brahma Private Limited.