ಲೇಖಕ ಕೇಶವಪ್ರಸಾದ್ ಬಿ. ಕಿದೂರು ಅವರು ಬರೆದ ಕೃತಿ-ಕೃಷಿ ಕಾಯಿದೆ-2020. ಕೇಂದ್ರದ ಕೃಷಿ ಕಾಯಿದೆ ವಿರೋಧಿಸಿ ದೆಹಲಿಯಲ್ಲಿ ರೈತರು ಕಳೆದ 2 ತಿಂಗಳಿಂದ ಧರಣಿ ನಡೆಸುತ್ತಿದ್ದು, ಈ ಪ್ರಕರಣವು ದೇಶಾದ್ಯಂತ ಸಂಚಲನ ಮೂಡಿಸಿದೆ. ನೂತನ ಕಾಯಿದೆಗಳು ರೈತ ಪರ ಇವೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಇವು ರೈತ ವಿರೋಧಿ ಎಂದು ಸತ್ಯಾಗ್ರಹಿಗಳು ಪ್ರತಿವಾದಿಸುತ್ತಿದ್ದಾರೆ. ವಾಸ್ತವಾಂಶ ಏನು? ಹೇಗೆ? ಎತ್ತ? ಎಂಬ ಬಗ್ಗೆ ಲೇಖಕರು ಚರ್ಚಿಸಿ ಸಂಕ್ಷಿಪ್ತ ನೋಟ ನೀಡಿದ್ದೇ ಈ ಕೃತಿ. ಕಾಯಿದೆಯಲ್ಲಿಯ ಬದಲಾವಣೆಗಳು, ಈಗಿದ್ದ ಕಾಯಿದೆಗಳಿಗಿಂತ ನೂತನ ಕಾಯಿದೆ ಹೇಗೆ ಭಿನ್ನ, ಅದು ರೈತರಿಗೆ ಹೇಗೆ ಉಪಯೋಗ, ಎಷ್ಟು ಮಾರಕ ಎಂಬಿತ್ಯಾದಿ ಅಂಶಗಳನ್ನು ವಿಶ್ಲೇಷಿಸಿದ ಕೃತಿ ಇದು.
©2024 Book Brahma Private Limited.