`ಕೋಣೆಯಾಚೆಗಿನ ಆಕಾಶ’ ಕೃತಿಯು ಪದ್ಮಿನಿ ನಾಗರಾಜು ಅವರ ವಿಮರ್ಶಾ ಲೇಖನಸಂಕಲನವಾಗಿದೆ. ಈ ಕೃತಿಗೆ ಮುನ್ನುಡಿ ಬರೆದಿರುವ ರಾಘವೇಂದ್ರ ಪಾಟೀಲ ಅವರು, ಸಂಕಲನದ ಶೀರ್ಷಿಕೆ ‘ಕೋಣೆಯಾಚೆಗಿನ ಆಕಾಶ’ ಅತ್ಯಂತ ರೂಪಕಾತ್ಮಕವಾದುದು ಆಗಿದ್ದು ಹಲವು ಅರ್ಥ ವಿನ್ಯಾಸಗಳನ್ನು, ಹಲವು ಸಂದರ್ಭಗಳ ವಿನ್ಯಾಸವನ್ನು ಪ್ರಸ್ತುತಪಡಿಸುತ್ತದೆ. ಮೊದಲನೆಯದಾಗಿ, ನೀವು ನೋಡುತ್ತಿರುವ ಆಕಾಶ ನಿಮ್ಮ ಕೋಣೆಯೊಳಗೆ ಕುಳಿತು ಕಿಟಕಿಯ ಮೂಲಕ ನೋಡುತ್ತಿರುವಂತಹದು ಎನ್ನುವುದು.. ಇದು ಮೂರು ಕೋಣೆಯೊಳಗಿರುವಂತೆ ನಿರ್ಬಂಧಿಲಸಾಗಿದ್ದು ನೀವು ಅಲ್ಲಿಂದಲೇ ಹೊರಗಿನ ವಿಶಾಲವಾಗಿರುವ ಚುಕ್ಕೆ ನಕ್ಷತ್ರಖಚಿತ ವಿಶಾಲವಾದ ಆಕಾಶವನ್ನು ಸಂಕೋಚದ ಮೂಲಕ ನೋಡಬೇಕಾಗಿದೆ; ಇನ್ನೊಂದು, ನೀವು ಹೆಣ್ಣು ಆಗಿರುವ ಕಾರಣಕ್ಕೆ ನಿಮಗೆ ಆರೋಪಿಸಲಾದ ದೌರ್ಬಲ್ಯಗಳ ಕಾರಣವಾಗಿ, ನೀವು ಕೊಣೆಯಾಚೆಗೆ ಬಂದು ವಿಶಾಲವಾದ ಆಕಾಶವನ್ನು ನೋಡಲಾಗುತ್ತಿಲ್ಲ ಎನ್ನುವುದು ಮತ್ತು, ಇನ್ನೊಂದು, ನೀವು, ಕೋಣೆಯಾಚೆಗೆ ಬಂದು ವಿಶಾಲ ಆಕಾಶದ ಕೆಳಗೆ ನಿಂತು ಆಕಾಶವನ್ನು ಸಮಗ್ರವಾಗಿ ನೋಡಿ ನೀಡುತ್ತಿರುವ ಆಕಾಶದ ಕುರಿತ ನಿಮ್ಮ ಪ್ರಾಮಾಣಿಕ ಗ್ರಹಿಕೆಯನ್ನು, ಪುರುಷಪ್ರಧಾನ ಸಾಂಸ್ಕೃತಿಕಲೋಕ ನೀವು ಹೆಣ್ಣಾಗಿರುವ ಕಾರಣ, ನೀವು ಕೋಣೆಯೊಳಗೆ ಕುಳಿತು ನೋಡಿದ ಪಾರ್ಶ್ವ ನೋಟವೇ ಎನ್ನುತ್ತ ಉಡಾಫೆಯ ದೃಷ್ಟಿಯಿಂದ ನೋಡುತ್ತದೆ ಎನ್ನುವುದು... ಈ ಮೂರೂ ಅರ್ಥ ಸಂದರ್ಭಗಳು ಭಾರತೀಯ ಸಾಂಸ್ಕೃತಿಕ ಸಂದರ್ಭದಲ್ಲಿ ಇನ್ನೂ ಚಾಲ್ತಿಯಲ್ಲಿವೆ. ಭಾರತೀಯ ಮರುಷಪ್ರಧಾನ ಸಾಮಾಜಿಕ ಸಂದರ್ಭವು ಹೆಣ್ಣಿಗೆ ಸಂಕುಚಿತ ಕೋಣೆಯನ್ನು ಅವಳಿಗೆ ಅಧಿಕೃತ ನಿವಾಸವನ್ನಾಗಿಸಿ, ಅವಳಿಗೆ ಆಕಾಶದ ನೋಟವನ್ನು ಕಿಟಕಿಯ ಮೂಲಕ ಮಾತ್ರ ದೊರೆಯುವಂತೆ ಮಾಡಿದೆ. ಹೀಗೆ, ಒಟ್ಟಿನಮೇಲೆ, ನಮ್ಮ ಸಂದರ್ಭದಲ್ಲಿ ಹೆಣ್ಣಿನ ಸಂವೇದನೆಯನ್ನು ಸಂಕುಚಿತಗೊಳಿಸಲಾಗಿದೆ ಎನ್ನುವ ಭಾವ ಸ್ಪಷ್ಟವಾಗುತ್ತದೆ. ಭಾರತೀಯ ಹೆಣ್ಣು ತನ್ನ ಬುದ್ದಿ ಹಾಗೂ ಭಾವಕೋಶದ ನೆಲೆಯಲ್ಲಿ ನಡೆಸುವ ಸಾಹಿತ್ಯ-ಸಂಸ್ಕೃತಿ-ಸಾಮಾಜಿಕ ಸಂದರ್ಭದ ಅನುಸಂಧಾನವನ್ನು ನಮ್ಮ ಪುರುಷ ಪ್ರಧಾನವಾದ ಸಾಂಸ್ಕೃತಿಕ ಲೋಕವು ಅಧಿಕೃತವೆಂದು ಪರಿಗಣಿಸದಿರುವ ತಾರತಮ್ಯದ ಬಗೆಗಿನ ಅಸಂತೋಷವನ್ನೂ ಈ ರೂಪಕ ಪ್ರತಿನಿಧಿಸುತ್ತದೆ. ನಾನು ಈ ಮೇಲೆ ಉಲ್ಲೇಖಿಸುವ ಮೂರೂ ಅರ್ಥ ಸಂದರ್ಭಗಳ ವಿನ್ಯಾಸಗಳನ್ನು ನೀವು ನಿಮ್ಮ ಈ ಸಂಕಲನದ ಶೀರ್ಷಿಕೆಯ ಮೂಲಕ ವ್ಯಕ್ತಪಡಿಸುತ್ತಿದ್ದೀರಿ. ಆದರೆ ನೀವು ನಿಮ್ಮ ಲೇಖನಗಳ ಮೂಲಕ ಈ ಮೂರುನೆಲೆಗಳಲ್ಲಿ ಯಾವ ನೆಲೆಯ ಅರ್ಥ ಸಂದರ್ಭವನ್ನು ಪ್ರತಿನಿಧಿಸುತ್ತೀರಿ ಎನ್ನುವ ಪ್ರಶ್ನೆ ಕೇಳುವುದಾದರೆ - ಆದರೆ ನೀವು ಮೊದಲೆರಡು ನೆಲೆಗಳ ಹೆಣ್ಣಿನ ನಿರ್ಬಂಧಿತ ಮತ್ತು ದೌರ್ಬಲ್ಯ ಆರೋಪಿತ ನೆಲೆಗಳ ಅನಿವಾರ್ಯ ಸಂಕುಚಿತತೆಯನ್ನು ಮೂಡಿಸುತ್ತಿದ್ದೀರಾ ಅಥವಾ, ಮೂರನೆಯ ನೆಲೆಯ ಹೆಚ್ಚಿನ ಪ್ರಾಮಾಣಿಕ ಸಂವೇದನೆಗಳನ್ನು ಗಂಡು ಉಡಾಫೆಯಿಂದ ಉಣುತ್ತದೆ ಎನ್ನುವ ನೆಲೆಯನ್ನು ಪ್ರತಿನಿಧಿಸುತ್ತೀರಾ ಎನ್ನುವುದನ್ನು ನಿಮ್ಮ ಲೇಖನಗಳ ನೆಲೆಯಲ್ಲಿಯೇ ನೋಡಬೇಕಾಗುತ್ತದೆ ಎಂದು ಬರೆದಿದ್ದಾರೆ.
ಪದ್ಮಿನಿ ನಾಗರಾಜು ಅವರು ಮೈಸೂರು ಜಿಲ್ಲೆಯ ಸಾಲಿಗ್ರಾಮದವರು. ಗಂಗಾವತಿ, ಚಿಕ್ಕಮಗಳೂರಿನಲ್ಲಿ ವಿದ್ಯಾಭ್ಯಾಸ. ಸ್ನಾತಕೋತ್ತರ ಹಾಗೂ ಪಿಎಚ್.ಡಿ ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ. ಪ್ರಸ್ತುತ 'ರಾಣಿ ಸರಳಾದೇವಿ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಹಾಗೂ ‘ಕೇಂದ್ರ ಸಾಹಿತ್ಯ ಅಕಾಡೆಮಿ'ಯ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಅವರ ಅನೇಕ ಲೇಖನ, ಕಥೆ, ಕವಿತೆಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಂಕಣಕಾರ್ತಿಯಾಗಿಯು ಗುರುತಿಸಿಕೊಂಡಿದ್ದಾರೆ. 'ಗೆಳತಿಯಾಗುವುದೆಂದರೆ' (ಕವನ ಸಂಕಲನ), 'ಸಮಾಧಿ ಮೇಲಿನ ಹೂ' (ಕಥಾ ಸಂಕಲನ), 'ಅವ್ವ' (ಲಂಕೇಶರ ಆತ್ಮಚರಿತ್ರೆಯನ್ನು ಆಧರಿಸಿದ ನಾಟಕ), 'ಅರಿವಿನ ಮಾರ್ಗದ ಸೋಪಾನಗಳು-ಅನುಪ್ರೇಕ್ಷೆಗಳು' (ಸಂಶೋಧನೆ), ಕೃಷ್ಣಮೂರ್ತಿ ಕವತ್ತಾರ (ವ್ಯಕ್ತಿಚಿತ್ರ), ಸಮತ್ವ (ಪ್ರಬಂಧ ಸಂಕಲನ) ...
READ MORE