ಕೊನಷ್ಟ್ಯೆ ಕಥೆಗಳೆಂದರೆ ತಮಿಳು ಸಾಹಿತ್ಯದಲ್ಲಿ ವಿಶೆಷ ಸ್ಥಾನ. ಗೊರೂರು ರಾಮಸ್ವಾಮಿ ಅಯ್ಯಂಗಾರರು ತಮಿಳುನಿಂದ ಕನ್ನಡಕ್ಕೆ ಅನುವಾದಿಸಿದ ಕಥೆಗಳ ಸಂಗ್ರಹವೇ-ಕೊನಷ್ಟ್ಯೆ ಕತೆಗಳು. ದುಃಖ ದುಮ್ಮಾನ ತುಂಬಿದ ಮನಸ್ಸಿಗೆ ನೆಮ್ಮದಿ ತರುವ ಕಥೆಗಳಿವು. ನಗೆಯನ್ನು ಮರೆಯುತ್ತಿರುವ ಸಾಹಿತ್ಯಾಸಕ್ತರಿಗೆ ಇದೊಂದು ಉತ್ತಮ ಕೃತಿ. ಜ್ಯೋತಿಷ್ಯ, ಕಮೀಷನರರ ಕೊರಗು, ಅರ್ಧ ಮುಗಿದ ಕತೆಗಳು, ಸಾವಿರದ ಎರಡನೇ ಕತೆ ಸೇರಿದಂತೆ ಒಟ್ಟು 18 ಕತೆಗಳು ಇಲ್ಲಿ ಸಂಕಲನಗೊಂಡಿವೆ. ಕೊನಷ್ಟ್ಯೆ-ಮದ್ರಾಸ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳು. ಸಂಸ್ಕೃತ ಪಂಡಿತರು. ಪ್ರತಿಯೊಂದು ಘಟನೆ-ಸನ್ನಿವೇಶವನ್ನು ವಿನೋದ ದೃಷ್ಟಿಯಿಂದ ನೋಡುವುದು ಸಾಹಿತ್ಯ ರಚನೆಗೆ ಪ್ರೇರಣೆಯಾಗಿದೆ.
ಈ ಪುಸ್ತಕದ ಮೊದಲ ಮುದ್ರಣ-1952
ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡದ ಜನಪ್ರಿಯ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಗೊರೂರು ಗ್ರಾಮದಲ್ಲಿ 1904ರ ಜುಲೈ 4ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ ತಾಯಿ ಲಕ್ಷ್ಮಮ್ಮ. ಗೊರೂರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿದ ಮೇಲೆ ಹಾಸನದಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಅನಂತರ ಗುಜರಾತ್ ಗಾಂಧಿ ಆಶ್ರಮದಲ್ಲಿದ್ದ ವಿದ್ಯಾ ಪೀಠದಲ್ಲಿ ಓದು ಮುಂದುವರೆಸಿದರು. ಅನಂತರ ಪತ್ರಿಕಾರಂಗ ಪ್ರವೇಶಿಸಿದರು. ಮದರಾಸಿನ `ಲೋಕಮಿತ್ರ’ ಆಂಧ್ರ ಪತ್ರಿಕೆ `ಭಾರತಿ’ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿದರು. 1952ರಲ್ಲಿ ವಿಧಾನಸಭೆಗೆ ನಾಮಕರಣಗೊಂಡಿದ್ದ ಅವರು ಅದಕ್ಕೂ ...
READ MORE