ಈ ಕೃತಿಯಲ್ಲಿ ಪ್ರಯುಖ ದೈವ ಮರಗಳನ್ನು ಮಾತ್ರವೇ ವಿಶ್ಲೇಷಿಸಲಾಗಿದೆ. ಇನ್ನೂ ಹಲವು ದೈವ ಹಾಗೂ ಜೈನ ಪುರಾಣಗಳು ಕಾಡುಗೊಲ್ಲ ಸಂಸ್ಕೃತಿಯಲ್ಲಿ ಇವೆ. ಆದರೆ ಅವುಗಳು ಕೈಯ್ಯಾಡಿಸಿರುವುದು ಮೇಲುನೋಟಕ್ಕೆ ಕಂಡುಬರುವುದಿಲ್ಲ. ಆದಾಗ್ಯೂ ಪ್ರಧಾನ ದೈವಗಳಾಗಿರುವ ಪಂಚಲಿಂಗಗಳ ಪುರಾ ಎತ್ತಪ್ಪ, ಜುಂಜಪ್ಪರ ಮರಾಣಗಳ ಛಾಯೆ ಅವುಗಳ ಮೇಲೂ ಆದಂತೆ ಕಾಡುತ್ತದೆ. ಇದು ಕೇವಲ ಹಾಡುಗಾರರ ಹಂತದಲ್ಲಿ ನಡೆದಿರುವ ಸಾದೃಶ್ಯ ಸೃಷ್ಟಿಯಾಗಿಯೂ ಗ್ರಹಿಸಬಹುದಾಗಿದೆ. ಈ ಕ್ಷೇತ್ರದಲ್ಲಿ ಮತ್ತಷ್ಟು ಅಗೆಯುವ, ಬಗೆಯುವ, ಶೋಧಿಸುವ ಅಗತ್ಯವಿದೆ, ಮುಂದೆ ಅಧ್ಯಯನ ಈರರು ಈ ಬಗೆಗೆ ಗಮನಹರಿಸಿದಲ್ಲಿ ಸಮೃದ್ಧ ಹುಲ್ಲುಗಾದವಾಗಿರುತ್ತದೆ ಎಂದು ಕೆ.ತಿಮ್ಮಯ್ಯ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.