ಕವಲು

Author : ಎಂ.ಕೆ. ಇಂದಿರಾ

₹ 50.00




Year of Publication: 2011
Published by: ಪ್ರಕಾಶ ಸಾಹಿತ್ಯ
Address: ಬೆಂಗಳೂರು.

Synopsys

ಕಾದಂಬರಿಗಾರ್ತಿ ಎಂ. ಕೆ. ಇಂದಿರಾ ಅವರ ಕೃತಿ ‘ಕವಲು’. ಈ ಪುಸ್ತಕದಲ್ಲಿ "ಕವಲು" ಎಂಬ ನೀಳ್ಗತೆಯೊಂದಿಗೆ "ಕಲಾಸಂಗಮ" ಎಂಬ ಕಿರು ಕಾದಂಬರಿಯೂ ಇದೆ. ಕವಲು ಒಂದು ನೀಳ್ಗತೆ. ನರಸಿಂಹರಾಜಪುರದ ಹತ್ತಿರವಿರುವ ಹಿಳವಳ್ಳಿಯ ರೈತ ಕುಟುಂಬದ ಹಿರಿಯರಾದ ಸೂರಪ್ಪನವರ ಐದು ಮಕ್ಕಳಲ್ಲಿ ನಾಲ್ಕನೆಯವಳು, ಮಗಳು ಪದ್ಮ. ಅಣ್ಣಂದಿರು ಓದು ತಲೆಗೆ ಹತ್ತದೆ, ಶಾಲೆ ಬಿಟ್ಟು ತಮ್ಮ ಗದ್ದೆಯಲ್ಲಿ ಕೆಲಸ ಮಾಡುವಾಗ, ಪದ್ಮ ಕೂಡ ಜೊತೆ ಸೇರುತ್ತಿದ್ದಳು. ಕೃಷಿಭೂಮಿಯ ಮೇಲೆ ವಿಶೇಷ ಪ್ರೀತಿ ಇದ್ದೂ, ವಿದ್ಯಾವಂತಳಾಗಬೇಕೆಂಬ ಗುರಿ ಅವಳಿಗಿತ್ತು. ಉಳುವವನಿಗೇ ಭೂಮಿ ಎಂಬ ಕಾನೂನು ಬಂದು ತಮ್ಮ ಭೂಮಿ ಕೈಬಿಟ್ಟು ಹೋಗಬಾರದೆಂಬುದು ಅವಳ ಧ್ಯೇಯ. ಅದಕ್ಕಾಗಿ ಹಠಮಾಡಿ ತಂದೆಯ ಮನ ಗೆದ್ದು ಶಿವಮೊಗ್ಗದಲ್ಲಿ ನೆಂಟರ ಮನೆಯಲ್ಲಿದ್ದು ಕಾಲೇಜಿಗೆ ಹೋಗುತ್ತಾಳೆ. ನಾಲ್ಕು ವರ್ಷಗಳ ಕಾಲ ಅಧ್ಯಯನ ಮಾಡಿ ವ್ಯವಸಾಯ ವಿಭಾಗದಲ್ಲಿ ಪದವಿ ಪಡೆಯುತ್ತಾಳೆ. ಆಲ್ಲಿಗೇ ಮುಗಿಸದೆ ಬೆಂಗಳೂರಿನಲ್ಲಿ ಹಾಸ್ಟೆಲ್ ನಲ್ಲಿದ್ದು ಅಗ್ರಿಕಲ್ಚರ್ ಕಾಲೇಜಿಗೆ ಸೇರುತ್ತಾಳೆ. ಕೃಷಿಯನ್ನು ಮುಖ್ಯ ಉದ್ಯೋಗವಾಗಿ ಸ್ವೀಕರಿಸಿ ಹಳ್ಳಿಯಲ್ಲಿಯೇ ಬದುಕು ಸಾಗಿಸುವ ಛಲದಿಂದ ಮನಸ್ಸಿಟ್ಟು ಓದುತ್ತಾಳೆ. ಎರಡನೆಯ ವರ್ಷದಲ್ಲಿ ಓದುತ್ತಿರುವಾಗ ಪರಿಚಯವಾದ ಲೆಕ್ಚರರ್ ರಾಘವೇಂದ್ರ ಅವಳಲ್ಲಿ ಆಸಕ್ತನಾಗುತ್ತಾನೆ. ತನ್ನ ಊರಾದ ಕೊಪ್ಪಕ್ಕೆ ಹೋಗುವ ದಾರಿಯಲ್ಲಿ ಅವಳ ಹಳ್ಳಿ ಇದೆಯೆಂದು ತಿಳಿದುಕೊಂಡ ಮೇಲೆ ಇನ್ನೂ ಸಂತೋಷ ಪಡುತ್ತಾನೆ. ಸರಳವಾಗಿ ತನ್ನ ಪಾಡಿಗಿದ್ದು ಚೆನ್ನಾಗಿ ಓದುತ್ತಿದ್ದ ಪದ್ಮ ಎಲ್ಲರಿಗೂ ಇಷ್ಟವಾಗುತ್ತಿದ್ದಳು. ಪದ್ಮ ಸ್ನಾತಕೋತ್ತರ ಪದವಿ ಪಡೆದು ಊರಿಗೆ ಮರಳುವಾಗ ರಾಘವೇಂದ್ರನ ಊರಾದ ಕೊಪ್ಪಕ್ಕೆ ಹೋಗುವ ದಾರಿಯಲ್ಲಿ ಪದ್ಮಳ ಊರಾದ ಹಿಳವಳ್ಳಿ ಇರುವುದರಿಂದ ಆ ಕಡೆಗೆ ಹೋಗುವಾಗ ಮನೆಗೆ ಬನ್ನಿ ಎಂದು ಸಹಜವಾಗಿ ಆಮಂತ್ರಣ ಕೊಟ್ಟು ಹೋಗುತ್ತಾಳೆ. ಅದರ ಪ್ರಕಾರ ಬಂದ ರಾಘವೇಂದ್ರನಿಗೆ ಪದ್ಮಳ ಮನೆಯಲ್ಲಿ ಒಳ್ಳೆಯ ಆತಿಥ್ಯ ಸಿಕ್ಕಿ, ಮನದಲ್ಲೇ ಮಂಡಿಗೆ ತಿನ್ನುತ್ತಾನೆ. ಪದ್ಮಳ ಸಮ್ಮತಿ ಪಡೆಯಲು ಅವಕಾಶಕ್ಕಾಗಿ ಕಾಯುತ್ತಾನೆ. ತನ್ನಂತಹ ಸುಂದರ, ವಿದ್ಯಾವಂತ ಹಾಗೂ ಗುಣವಂತನಾದ ಗಂಡನ್ನು ಪದ್ಮ ಖಂಡಿತವಾಗಿಯೂ ಒಪ್ಪುವಳೆಂಬ ನಂಬಿಕೆಯಿಂದ ಮುಂದಿನ ಸುಂದರ ಸಾಂಸಾರಿಕ ಜೀವನದ ಕನಸು ಕಾಣುತ್ತಾನೆ. ಆದರೆ ಊಟಕ್ಕೆ ಕುಳಿತಾಗ ಪದ್ಮಳ ತಾಯಿ ಹೇಳಿದ ಒಂದು ಮಾತಿನಿಂದ ರಾಘವೇಂದ್ರನಿಗೆ ಪದ್ಮ ಮತ್ತು ತಾನು ಕವಲು ದಾರಿಯಲ್ಲಿರುವ ಅನುಭವವಾಗುತ್ತದೆ. ಅದೇನಿರಬಹುದು? ಪದ್ಮಳನ್ನು ಒಂದು ಮಾತು ಕೇಳದೆ, ಅವಳ ಒಪ್ಪಿಗೆ ಇಲ್ಲದೆ, ಅವಳು ತನ್ನವಳಾಗುವಳೆಂದು ಊಹಿಸಿದ ರಾಘವೇಂದ್ರ ಕಂಡುಕೊಂಡ ಸತ್ಯ ಯಾವುದು? ಇದರ ಉತ್ತರ ಪಡೆಯಲು ಈ ಪುಸ್ತಕ ಓದಲೇಬೇಕು. ಪ್ರಥಮ ಮುದ್ರಣ 1979, ದ್ವಿ. ಮುದ್ರಣ 2011

About the Author

ಎಂ.ಕೆ. ಇಂದಿರಾ
(05 January 1917 - 15 March 1994)

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ  2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...

READ MORE

Related Books