ಮೂಲ ಲೇಖಕಿ ಶಿವಶಂಕರಿರವರು ಬರೆದ ಕಾದಂಬರಿಯನ್ನು ಕಾದಂಬರಿಕಾರ್ತೀ ಚಿತ್ರಲೇಖರವರು ಕರುಣಾ ಹತ್ಯೆ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಈ ಕಾದಂಬರಿಯು ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ದಾಂಪತ್ಯವೆಂದರೆ ಬರೀ ಇಬ್ಬರು ವ್ಯಕ್ತಿಗಳು ಒಂದಾಗಿ ಒಂದು ಸೂರಿನಡಿಯಲ್ಲಿ ವಾಸಿಸುವುದಲ್ಲ. ಬದಲಿಗೆ ಎರಡು ವಿಭಿನ್ನವಾದ ಪರಿಸರಗಳಲ್ಲಿ ಬೆಳೆದ ಇಬ್ಬರು ವಿಭಿನ್ನ ವ್ಯಕ್ತಿಗಳು ಪರಸ್ಪರ ನಂಬಿಕೆ ಪ್ರೀತಿ ವಿಶ್ವಾಸಗಳಿಂದ ತಮ್ಮ ಬದುಕನ್ನು ಸುಂದರವಾಗಿ ಸರಸಮಯವಾಗಿ ರೂಪಿಸಿಕೊಳ್ಳುವ ಒಂದು ಅದ್ಭುತವಾದ ಬಾಂಧವ್ಯ ಪರಸ್ಪರ ಗೌರವಗಳಿದ್ದಾಗ ಆ ದಾಂಪತ್ಯ ಹಳಿ ತಪ್ಪುವ ಸಾಧ್ಯತೆಗಳು ಬಹಳ ಕಡಿಮೆ....ಅಪರಿಚಿತರಾಗಿದ್ದ ಇಬ್ಬರು ವ್ಯಕ್ತಿಗಳು ಜೀವಕ್ಕೆ ಜೀವ ಎನ್ನುವಂತೆ ಬೆಸೆದು ಹೋಗುವ ಈ ಬಂಧ ಪರಸ್ಪರರ ಬದುಕನ್ನೇ ಅಪೂರ್ವವಾಗಿ ಬದಲಾಯಿಸಿಬಿಡುತ್ತದೆ ಎಂಬ ಸಾರಾಂಶವನ್ನು ಈ ಕತೆ ಸಾರುತ್ತದೆ. 1988ರಲ್ಲಿ ಮೊದಲ ಮುದ್ರಣ ಕಂಡ ಈ ಕೃತಿ 2009ರಲ್ಲಿ ಎರಡನೇ ಮುದ್ರಣ ಕಂಡಿದೆ.
©2024 Book Brahma Private Limited.