ಎಸ್.ಸಿ. ಪಾಟೀಲ ಅವರ ಕೃತಿ ಕರ್ನಾಟಕದ ಜನಪದ ಚಿತ್ರಕಲೆ. ಜನಪದ ಕಲೆಯ ಚಾರಿತ್ರಿಕ ರೂಪಾಂತರವನ್ನು ವಿವರಿಸುವ ಕೃತಿ ಇದಾಗಿದೆ. ನಿಸರ್ಗ, ಸೌಂದರ್ಯ,ಜನಪದ ಧರ್ಮ,ವೃತ್ತಿಮೂಲ ನೆಲೆಯ ಕಲಾ ಪರಂಪರೆಯ ಪರಿಚಯಾತ್ಮಕ ನೆಲೆಯ ಕೃತಿಯಿದು. ಜನಪದ ಚಿತ್ರಕಲೆಯ ಬಗೆಗೆ ತಿಳಿಯಬಯಸುವವರಿಗೆ, ಅಧ್ಯಯನ ಸಂಶೋಧನೆ ಮಾಡುವವರಿಗೆ ಒಂದು ಆಕರವಾಗಿದೆ. ಈ ಕೃತಿಯ ಮಾಹಿತಿಗಳನ್ನು ಆಧರಿಸಿ ಗಂಭೀರ ಸಂಶೋಧನೆ ಕೈಗೊಳ್ಳಲು ಕಲಾ ವಿದ್ಯಾರ್ಥಿಗಳಿಗೆ ನೆರವಾಗುಂತಿದೆ.
©2025 Book Brahma Private Limited.