ಎಸ್. ವಿ. ಶ್ರೀನಿವಾಸರಾವ್ ಅವರ ಕೃತಿ ಕನ್ನಡ ಸಾಹಿತಿಯ ದರ್ಶನ. ಸುಮಾರು ಹನ್ನೊಂದು ಶತಮಾನಗಳ ಇತಿಹಾಸವಿರುವ ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಇದು ಕನ್ನಡಿ. ಹತ್ತೊಂಬತ್ತನೇ ಶತಮಾನದಿಂದ ಈವರೆಗಿನ ಸಾಹಿತ್ಯವೇ ವೈವಿಧ್ಯಮಯವಾಗಿದೆ, ಶ್ರೀಮಂತವಾಗಿದೆ. ಈ ಅವಧಿಯಲ್ಲಿ ಸಾಹಿತ್ಯರಚನೆ ಮಾಡಿದ ನುಡಿ ಸೇವಕರ ಸಂಖ್ಯೆಯೇ ಎರಡೂವರೆ ಸಾವಿರವನ್ನು ಮೀರಬಹುದು. ಒಟ್ಟು ಸುಮಾರು ಮೂರು ಸಾವಿರ ಸಾಹಿತಿಗಳನ್ನು ಕುರಿತ ಮಾಹಿತಿಯನ್ನು ಸಂಗ್ರಹಿಸಿ ಒಂದೆಡೆ ತಂದಿರುವುದೇ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಇರುವವರಿಗೆ ಉಪಕಾರ.
ಎಸ್.ವಿ. ಶ್ರೀನಿವಾಸರಾವ್ ಅವರು ತುಮಕೂರು ಜಿಲ್ಲೆಯ ಗೂಳೂರು ಹೋಬಳಿಯ ಚಿಕ್ಕಸಾರಂಗಿ ಗ್ರಾಮದಲ್ಲಿ 1931 ಡಿಸೆಂಬರ್ 24ರಂದು ಜನಿಸಿದರು. ಮನೆತನದಿಂದ ಶ್ಯಾನುಭೋಗರು. ತಂದೆ ಶ್ಯಾನುಭೋಗ್ ವೆಂಕಟರಾಮಯ್ಯ, ತಾಯಿ ಪುಟ್ಟಚ್ಚಮ್ಮ. ಬಿಎಸ್ಸಿ, ಎ.ಎಂ.ಐ.ಇ ಹಾಗೂ ಮೈಸೂರು ವಿ.ವಿ.ಯಿಂದ ಎಂ.ಎ. ಪದವೀಧರರು. ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಸಿಕ್ಯೂಎಎಲ್ ನಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಓದಿದ್ದು, ವಿಜ್ಞಾನವಾದರೂ ಸಾಹಿತ್ಯದ ಗೀಳು. ಕಾಡ ಬೆಳದಿಂಗಳು, ಮಬ್ಬು ಮುಂಜಾವು, ಸ್ವರಮೇಳ, ಇಬ್ಬನಿ, ರಂಗಸ್ಥಳ ಸೇರಿದಂತೆ 156ಕ್ಕೂ ಹೆಚ್ಚು ಕಥೆ, ಕಾದಂಬರಿಗಳು ಹಾಗೂ ಮಕ್ಕಳ ಸಾಹಿತಿಗಳ ಕುರಿತ ಮಕ್ಕಳೇ ಇವರನ್ನು ನೀವು ಬಲ್ಲಿರಾ ಕೃತಿ ಹಾಗೂ ...
READ MORE