ಪರಮೇಶ್ವರ ಕುದರಿಯವರು ವೃತ್ತಿಯಲ್ಲಿ ಶಿಕ್ಷಕರು. ಒಬ್ಬ ಶಿಕ್ಷಕ ಕ್ರಿಯಾಶೀಲನಾಗಿದ್ದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ತುಂಬಾ ವಿರಳವಾಗಿ ಸಿಗುವ ಶಿಕ್ಷಕರಲ್ಲಿ ಪರಮೇಶ್ವರ ಕುದರಿ ಕೂಡಾ ಒಬ್ಬರು.
ತಮ್ಮ ಕವಿತೆ, ಕಥೆ, ಹಾಸ್ಯ ಕಾರ್ಯಕ್ರಮ, ಸಂಘಟನೆ, ಇಲಾಖಾ ತರಬೇತಿಗಳು ಮತ್ತು ಮಕ್ಕಳ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಇವರು ಚಿತ್ರದುರ್ಗ ಜಿಲ್ಲೆಯಲ್ಲಿ ಗುರುತಿಸಿಕೊಳ್ಳುವಂತಹ ವ್ಯಕ್ತಿಯಾಗಿದ್ದಾರೆ. ಮಕ್ಕಳ ಮನಸ್ಸನ್ನು ಅರಳಿಸುವಲ್ಲಿ ಬಹುದೊಡ್ಡ ಪರಿಣಾಮ ಬೀರುವ ಮಕ್ಕಳ ಸಾಹಿತ್ಯದ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ಮಕ್ಕಳ ಮನಸ್ಸನ್ನು ಮುದಗೊಳಿಸುತ್ತಾ, ಅವರ ಭಾವನೆಗಳನ್ನು ಕೆರಳಿಸುತ್ತಾ-ಅರಳಿಸುತ್ತಾ, ತನ್ನ ಪರಿಸರವನ್ನು ಅರ್ಥಮಾಡಿಕೊಳ್ಳಲು ಪೂರಕವಾದ ಕಥೆ, ಕಾವ್ಯ, ನಾಟಕ, ಚಿತ್ರ ಅಟಗಳೆಲ್ಲವನ್ನೂ ಮಕ್ಕಳ ಸಾಹಿತ್ಯ ಎನ್ನಬಹುದು. ಅಂತಹ ಕವಿತೆಗಳು ’ಕೈಲಾಸದಲ್ಲಿ ಕ್ರಿಕೆಟ್’ ಸಂಕಲನದಲ್ಲಿವೆ.
ಲೇಖಕ ಪರಮೇಶ್ವರ ಕುದರಿ ಅವರು ಮೂಲತಃ ಧಾರವಾಡ ತಾಲೂಕು ಹೆಬ್ಬಳ್ಳಿಯವರು. ಕೃತಿಗಳು: ಕೋತಿ ಮತ್ತು ಫೋನು, ಬಗೆ ಬಗೆ ಆಟ, ಪುಟ್ಟು ಬೇಡಿದ ವರ, ಕೈಲಾಸದಲ್ಲಿ ಕ್ರಿಕೆಟ್, ಮಾತು-ಮುತ್ತು. ಇವರ ಬಗೆ ಬಗೆ ಆಟ’ ಕೃತಿಗೆ ರುಕ್ಮಿಣಿಬಾಯಿ ಸ್ಮಾರಕ ರಾಜ್ಯ ಪ್ರಶಸ್ತಿ, ’ದುರ್ಗದ ಸಿರಿ’ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಗುರು ಪುರಸ್ಕಾರ, ’’ಕನ್ನಡ ಸಾಹಿತ್ಯ ಸಾಗರದ ವಿದ್ಯಾ ರತ್ನ’ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ...
READ MORE