ಲೇಖಕರು, ಪ್ರಕಾಶಕರು ಉಮೇಶ್ ದೇಸಾಯಿ ಅವರ ಸಂಪಾದಿತ ಕಥಾ ಸಂಕಲನ ‘ಹೊಸ ಧ್ವನಿಗಳು’. ಡಿ.ವಿ.ಪ್ರಹ್ಲಾದ್ ಕೃತಿಗೆ ಬೆನ್ನುಡಿ ಬರೆದಿದ್ದು, ಇಲ್ಲಿರುವ ಎಲ್ಲಾ ಕತೆಗಳ ಕತೆಗಾರರೂ ತಮ್ಮ ಪರಂಪರೆಯ ಎಳೆಗಳನ್ನು ಜೊತೆಗಿಟ್ಟುಕೊಂಡೇ ಬರೆದಿದ್ದಾರೆ. ಮಾಸ್ತಿ, ವ್ಯಾ, ಚಿತ್ತಾಲ,ಜಯಂತೆ ಮೊದಲಾದವರಂತೆ ಜನಪ್ರಿಯ ನಿರೂಪಣೆಯ ತಂತ್ರ ಇಲ್ಲಿದೆ. ಕವಿತೆ ಇರಬಹುದಾದ ನಿರೂಪಣೆಯ ಮುಕ್ತತೆ ಸಣ್ಣ ಕತೆಯಲ್ಲಿ ಮಿತಗೊಳ್ಳುತ್ತದೆ. ಕತೆಯ ಹಂದರದ ಒಳಗೇ ಲೇಖಕರು ತಮ್ಮ ಸೃಜನಶೀಲತೆಯನ್ನು ನಿರೂಪಿಸಿದ್ದಾರೆ. ಈ ರೀತಿಯ ಸ್ಪರ್ಧೆಗಳು, ವಿವಿಧ ಲೇಖಕರ ಜೊತೆಗೂಡಿದ ಕವಿತೆ, ಕತೆ, ಪ್ರಬಂಧ ಸಂಕಲನಗಳು ಕಳೆದೊಂದು ಶತಮಾನದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದೆ. ಅತ್ಯುತ್ತಮ ಅನ್ನುವ ಭಾಷಿಕ ಕೃತಿಗಳು ಹೀಗೇ ಸದ್ದಿಲದ್ದೇ ಹೂವಿನ ಹಾಗೆ ಅರಳಿ ಬಿರಿದಿದೆ. ಅಪೇಕ್ಷೆ, ನಿರೀಕ್ಷೆಗಳು ಇರಬೇಕಾದ್ದು ಸಹಜವೇ, ಆದರೆ ವಾಸ್ತವ ಅನ್ನುವುದು ಇವೆರಡರ ತೆಳುಗೆರೆಯ ಮೇಲೆ ಕ್ಷಣಕ್ಕಷ್ಟೇ ಕುಳಿತ ಗುಬ್ಬಿ ಸಾಲಿನ ಹಾಗೆ, ಮುಂದಿನ ಕ್ಷಣಕ್ಕೆ ಮತ್ತೊಂದು ಆಗಿರುತ್ತದೆ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಜನಿಸಿದ ಉಮೇಶ ದೇಸಾಯಿ ಸದ್ಯ ಬೆಂಗಳೂರಿನಲ್ಲಿ ಲೆಕ್ಕಿಗರಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲಿಂದಲೂ ಸಾಹಿತ್ಯದಲ್ಲಿ ಆಸಕ್ತಿ. ’ಚೌಕಟ್ಟಿನಾಚೆ’ ಕಥಾಸಂಕಲನ ಹಾಗೂ ’ಭಿನ್ನ’ ಕಾದಂಬರಿ ಪ್ರಕಟಿಸಿದ್ದಾರೆ. ಸ್ವತಃ ಪ್ರಕಾಶನ ಸಂಸ್ಥೆ ನಡೆಸುತ್ತಿದ್ದು ಹೊಸ ಬರಹಗಾರರನ್ನು ಪ್ರೋತ್ಸಾಹಿಸುತ್ತಿದ್ದಾರೆ. ...
READ MORE