‘ಹರಿದಾಸರು ಸ್ತುತಿಸಿದ ಶ್ರೀ ಸತ್ಯಬೋಧತೀರ್ಥರು’ ಶ್ರೀನಿವಾಸ ಹಾವನೂರ ಅವರು ಸಂಪಾದಿಸಿರುವ ಕೃತಿ. ಕೃತಿಯ ಕುರಿತು ಬರೆಯುತ್ತಾ ಸೋದೆಯ ಶ್ರೀ ವಾದಿರಾಜರನ್ನು ಕುರಿತ ಹಾಡುಗಳ ಸಂಗ್ರಹವೊಂಜು 1998 ರಲ್ಲಿ ಹೊರತರಲಾಯಿತು. ಅದೇ ಮಾದರಿಯಲ್ಲಿ ಸಿದ್ಧವಾದ, ಸವಣೂರಿನ ಶ್ರೀ ಸತ್ಯಬೋಧರನ್ನು ಸ್ತುತಿಸಿದಂಥ ಹಾಡುಗಳು ಇಲ್ಲಿವೆ ಎಂದು ತಿಳಿಸಿದ್ದಾರೆ. ಈ ಮೊದಲು ಸುಮಾರು ಇಪ್ಪತ್ತು ಹಾಡುಗಳಷ್ಟೇ ಮುದ್ರಿತಗೊಂಡಿದ್ದವು. ಈಗ ಶ್ರೀಗಳವರನ್ನು ಸ್ತುತಿಸಿದ 18 ಜನ ಹರಿದಾಸರ ವಿವಿಧ ಬಗೆಯ 40 ಹಾಡುಗಳನ್ನು ಒಂದೆಡೆ ತಂದದ್ದಾಗಿದೆ. ಇದರ ಹೊಳಹನ್ನು ಹಾಕುವಲ್ಲಿ, ಮಾಹಿತಿಯನ್ನು ಒದಗಿಸುವಲ್ಲಿ ಮಿತ್ರ ಶ್ರೀ ಗೋವಿಂದಮೂರ್ತಿ ದೇಸಾಯಿಯವರು ವಿಶೇಷವಾಗಿ ನೆರವಾಗಿದ್ದಾರೆ ಎಂದು ತಿಳಿಸಿದ್ದಾರೆ.
©2025 Book Brahma Private Limited.