ಹಾಡೇನಪ್ಪ ನಾ ಹಾಡೇನ ಹಾಲಿನಂಥ ನನ ದೇವರನ

Author : ಶಿವಾನಂದ ಯಲ್ಲಪ್ಪ ಗುಬ್ಬಣ್ಣವರ

Pages 578

₹ 300.00




Published by: ಶಿವಾನಂದ ಗುಬ್ಬಣ್ಣನವರ ಪ್ರಕಾಶನ

Synopsys

‘ಹಾಡೇನಪ್ಪ ನಾ ಹಾಡೇನ ಹಾಲಿನಂಥ ನನ ದೇವರನ’ ಕೃತಿಯು ಶಿವಾನಂದ ಗುಬ್ಬಣ್ಣನವರ ಡೊಳ್ಳಿನ ಸಂಗ್ರಹ ಪದವಾಗಿದೆ. ಉತ್ತರ ಕರ್ನಾಟಕದ ಜನಪದ ಪ್ರಕಾರಗಳಲ್ಲಿ ಡೊಳ್ಳಿನ ಹಾಡಿನ ಹಿನ್ನೆಲೆ, ಸಂದರ್ಭ ಇದೆಲ್ಲದರ ಸಹಿತ ಇಲ್ಲಿ ಕೊಡಲಾಗಿದೆ. ಮೂಲತಃ ಡೊಳ್ಳಿನ ಹಾಡುಗಳು ಹಾಲುಮತ ಸಂಪ್ರದಾಯಕ್ಕೆ ಸೇರಿದವು. ಬಳಿಕ ಅವು ಶೈವ, ವೈದಿಕ ಸಂಪ್ರದಾಯಗಳನ್ನೂ ಹಾದು ಬಂದಿವೆ. ಇಲ್ಲಿ ಸಂಗ್ರಹಕಾರರು ಕುರುಬರ ಮೂಲ ಅವರ ಪೂರ್ತಿಯಾದ ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಕೊಟ್ಟಿದ್ದಾರೆ. ಹೀಗಾಗಿ ಅವು ಹೆಚ್ಚು ಅರ್ಥಪೂರ್ಣ ಎನ್ನಿಸುತ್ತವೆ. ಇಲ್ಲಿರುವ `ಜಾರತನ‘ ಎಂಬ ಡೊಳ್ಳಿನ ಪದವು ಒಂದು ಹಾದರದ ಕಥೆಯನ್ನು ನಿರೂಪಿಸುತ್ತದೆ. `ಕುಂದೂರ ಲಕ್ಷ್ಮಣ‘ನ ಹೆಂಡತಿಯ ಹಾದರದ ಕಥೆಯನ್ನು ನಿರೂಪಿಸುತ್ತದೆ. `ಕುಂದೂರ ಲಕ್ಷ್ಮಣ‘ನ ಹೆಂಡತಿಯ ಹಾದರದ ಕಥೆಯಿದು. ಗಂಡ ದಂಡಿಗೆ ಹೋದಾಗ ಊರ ಸಾಹುಕಾರನೊಂದಿಗಿನ ಸಲ್ಲಾಪವೇ ಹೆಂಡತಿಗೆ ಮುಳುವಾಗುತ್ತದೆ. ಹೆಂಡತಿಯ ನಡತೆಯ ಬಗ್ಗೆ ಗೊತ್ತಾಗಿ ಅವಳನ್ನು, ಸಾಹುಕಾರನನ್ನು ಕೊಲ್ಲುವುದನ್ನು ಈ ಡೊಳ್ಳಿನ ಪದ ನಿರೂಪಿಸುತ್ತದೆ. ತಪ್ಪು ಮಾಡಿದ ಹೆಂಡತಿಯನ್ನು ಕೊಲ್ಲುವ ಜಾನಪದ ಆಶಯ ಈ ಡೊಳ್ಳಿನ ಪದದಲ್ಲೂ ಇದೆ. ಇಂಥ ಕೆಲವು ಡೊಳ್ಳಿನ ಪದಗಳ ಸಂಗ್ರಹವನ್ನು ನಾವು ಈ ಪುಸ್ತಕದಲ್ಲಿ ಕಾಣಬಹುದು.

About the Author

ಶಿವಾನಂದ ಯಲ್ಲಪ್ಪ ಗುಬ್ಬಣ್ಣವರ
(01 January 1946 - 25 July 2020)

ಲೇಖಕ, ಪ್ರಾಧ್ಯಾಪಕ ಶಿವಾನಂದ ಯಲ್ಲಪ್ಪ ಗುಬ್ಬಣ್ಣವರ ಅವರು ಮೂಲತಃ ಕುಂದಗೋಳ ತಾಲ್ಲೂಕು ಹಿರೇನರ್ತಿ ಗ್ರಾಮದವರು. ಹುಟ್ಟಿದ್ದು 1946 ಜನವರಿ 01. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಲುಮತ ಸಮಾಜ ಸಂಸ್ಕೃತಿ ಚರಿತ್ರೆಯನ್ನು ನಿರೂಪಿಸುವ ಮೌಖಿಕ ರೂಪದ ಡೊಳ್ಳಿನ ಹಾಡುಗಳನ್ನು ಜನಪದರಿಂದ ಸಂಗ್ರಹಿಸಿ ಅವರು "ದೇವರ್ ಬಂದಾವ್ ಬನ್ನಿರೇ" ಶೀರ್ಷಿಕೆಯಡಿ ಎರಡು ಸಂಪುಟದಲ್ಲಿ ಪ್ರಕಟಿಸಿದ್ದರು. ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದ್ದು ಬರಕೋ ಪದ ಬರಕೊ (ಸಂಪಾದನೆ), ರಾಮೋಜೋಯಿಸರ ಕಾಳಗ, ಶಿಶುನಾಳ ಶರೀಫರ ಪದಗಳು (410 ಹಾಡುಗಳಸಂಗ್ರಹ) - ಅವರ ...

READ MORE

Related Books