‘ಹಾದು ಹೋಗುವ ಹಾಳೆಗಳು’ ಕೃತಿಯು ಸಂತೋಷ್ ತಮ್ಮಯ್ಯ ಅವರ ಲೇಖನ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; 2001 ರಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಹೈದರ್ ಮತ್ತು ಟಿಪ್ಪು ಬಗ್ಗೆ ಪ್ರಶಂಸೆಯ ಭಾಷಣ, ವಿಚಾರಸಂಕಿರಣಗಳು ನಡೆದುವು. ಜಾಹೀರಾತುಗಳಲ್ಲಿ ಟಿಪ್ಪು ವಿರಾಜಮಾನನಾದ. ಏಕೆಂದರೆ ಸರ್ಕಾರವೇ ಖುದ್ದು ಟಿಪ್ಪುವಿನ ಮರಣದ ದ್ವಿಶತಮಾನೋತ್ಸವವನ್ನು ಆಚರಿಸಲು ಮನಸ್ಸು ಮಾಡಿತ್ತು. ಆಗಲೂ ವಿರೋಧ ವ್ಯಕ್ತವಾಗಿತ್ತು. ದೇವನಹಳ್ಳಿಯಲ್ಲಿ ಹುಟ್ಟಿದನೆಂಬ ಕಾರಣಕ್ಕೆ ವಿಮಾನ ನಿಲ್ದಾಣಕ್ಕೂ ಆತನ ಹೆಸರಿಡಬೇಕೆಂದು ಉಗ್ರ ಭಾಷಣಗಳಾದಾಗಲೂ ವಿರೋಧ ವ್ಯಕ್ತವಾಗಿತ್ತು. ಟಿಪ್ಪುವಿನ ಕನ್ನಡ ಪ್ರೇಮದ ಬಗ್ಗೆಯೂಶೋಧಗಳಾದವು. ಹುಸಿ ಎಂದು ಸಾಬೀತಾದವು. ಆದರೂ ಆತನನ್ನು ಏಕಾಏಕಿ ಸಂತ ಎಂದು ಬಣ್ಣಿಸುವ ಉಮೇದೇಕೆ? ಹಾಗಂದ ಸಚಿವರಿಗೆ ಮಡಿಕೇರಿಯಲ್ಲಿ ಸಿಪಾಯಿಗಳುಕಾಣಲಿಲ್ಲವೇ? ಬಲಿದಾನಿಗಳು ಜ್ಞಾಪಕಕ್ಕೆ ಬರಲಿಲ್ಲವೆ? ಇನ್ನೂ ಮುರಿದ ಸ್ಥಿತಿಯಲ್ಲೇ ಇರುವ ದೇವಸ್ಥಾನಗಳು, ನಿರ್ವಂಶವಾಗಿರುವ ಕೊಡವ ಕುಟುಂಬಗಳು ಕಾಣಲಿಲ್ಲವೇ? ನಾಡಿನ ಹಬ್ಬ ‘ಹುತ್ತರಿ’ಗೆ ರಜೆ ಕೊಡದ ಸರ್ಕಾರಗಳಿಗೆ ಟಿಪ್ಪು ಜನ್ಮದಿನವನ್ನು ಆಚರಿಸುವ ಮನಸ್ಸು ಬಂದುಬಿಡುತ್ತದಲ್ಲ.ಜನರಲ್ ತಿಮ್ಮಯ್ಯ, ?ಫೀಲ್ಡ್ ಮಾರ್ಶಲ್ ಕಾರ್ಯಪ್ಪನವರ ಜನ್ಮಶತಮಾನೋತ್ಸವವೇ ನೆನಪಾಗದ ಸರ್ಕಾರಗಳಿಗೆ ಮನೆಹಾಳ ಟಿಪ್ಪು ನೆನಪಿಗೆ ಬರುತ್ತಾನೆಂದರೆ ಇದಕ್ಕೇನನ್ನಬೇಕು? ಎನ್ನುತ್ತದೆ ಈ ಕೃತಿ.
©2025 Book Brahma Private Limited.