ಎಚ್.ಜಿ.ಎಸ್. ಎಂದೇ ಖ್ಯಾತಿಯ ಹರಿಹರ ಗುಂಡಣ್ಣ ಸೋಮಶೇಖರ ರಾವ್ ಕಲಾವಿದರು. ಈಗಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಪ್ರವಾಸ ಹೊರಟ ಅವರ ಕುಟುಂಬದ ಇತರೆ ಸದಸ್ಎಯರ ಕಲೆಯು ನಾಡಿನ ತುಂಬ ಪ್ರಸರಿಸಿವೆ. ಮೈಸೂರಿನ ಮಹಾರಾಜಾ ಕಾಲೇಜಿನ ಸಾಂಸ್ಕೃತಿಕ ಸಂಪತ್ತನ್ನು ಬೆಳೆಸಿದ ಪ್ರಸಿದ್ಧ ಕಲಾವಿದರಲ್ಲಿ ಸೋಮಶೇಶರ ರಾವ್ ಕೂಡ ಒಬ್ಬರು. ಮುನ್ನೂರಕ್ಕಿಂತ ಹೆಚ್ಚು ನಾಟಕಗಳಲ್ಲಿ ಪೋಷಕ-ಪ್ರಧಾನ ಎಲ್ಲ ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಲನಚಿತ್ರ ಹಾಗೂ ಕಿರು ತೆರೆ ರಂಗದಲ್ಲೂ ಯಶಸ್ವಿ ನಟರೆನಿಸಿದ್ದಾರೆ. ಈ ಕಲಾವಿದರ ಕುರಿತು ಲೇಖಕ ಟಿ.ಆರ್. ಮಹಾದೇವಯ್ಯ ಅವರು ವಿವರಿಸಿದ ಕೃತಿ.
ಜಾನಪದ ತಜ್ಞ, ಪ್ರಾಧ್ಯಾಪಕರಾದ ಟಿ.ಆರ್. ಮಹಾದೇವಯ್ಯನವರು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದವರು. ತಾಯಿ ಹೊನ್ನಮ್ಮ. ತಂದೆ ರುದ್ರಯ್ಯ. ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಉಪಸಂಪಾದಕರಾಗಿ, ಕರ್ನಾಟಕ ಜಾನಪದ ಪರಿಷತ್ತಿನ ಜಾನಪದ ಕೋಶದ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಾಲೇಜು ದಿನಗಳಿಂದಲೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರಿಗೆ ಕಾವ್ಯಾನಂದ ಪುರಸ್ಕಾರ, ಸಾಹಿತ್ಯ ಶ್ರೀ ಪ್ರಶಸ್ತಿ, ಕಿಟ್ಟಲ್ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಇವರ ಪ್ರಮುಖ ಕೃತಿಗಳು: ಶಾಂತಿನಾಥಕವಿ, ...
READ MORE