‘ಗಿರಿಜಾ ಕಲ್ಯಾಣ’ ಕೃತಿಯು ಬಿ. ಸುರೇಶ್ ಅವರ ನಾಟಕ ಸಂಕಲನವಾಗಿದೆ. ಈ ಕೃತಿಯೊಂದು ಕೆಲವೊಂದು ವಿಚಾರಗಳನ್ನು ಹೀಗೆ ಕಟ್ಟಿಕೊಟ್ಟಿದೆ : ಒಂದು ಆಧುನಿಕ ಪುರಾಣ ಎಂಬ ಉಪಶೀರ್ಷಿಕೆಯೊಂದಿಗೆ ಹೊರಬಂದಿರುವ ಈ ನಾಟಕದ ಹೆಸರು `ಗಿರಿಜಾ ಕಲ್ಯಾಣ‘. ಅತ್ಯಂತ ಸಮಕಾಲೀನ ವಸ್ತುವನ್ನು ಜನಪದ ಕೌದಿಯಲ್ಲಿ ಅಲಂಕರಿಸಿ ಮುಂದಿಟ್ಟಿದ್ದಾರೆ ಲೇಖಕ ಸುರೇಶ್. ರೈತನ ಆತ್ಮಹತ್ಯೆಯನ್ನು ರೈತರ ಮಡದಿಯ ಕಣ್ಣಿಂದ ನೋಡುವ ವಿಶಿಷ್ಟ ನಾಟಕ `ಗಿರಿಜಾ ಕಲ್ಯಾಣ‘. ಬಿ. ಜಯಶ್ರೀ ತಂಡ ಇದನ್ನು ಈಗಾಗಲೇ ರಂಗಕ್ಕೆ ತಂದಿದೆ. ಮರಾಠಿ ಮತ್ತು ಹಿಂದಿಗೆ ಅನುವಾದವಾಗಿದೆ. ಇಲ್ಲಿ ಕವನ ರೂಪದಲ್ಲಿಯೂ ಕೆಲವೊಂದು ತುಣುಕುಗಳನ್ನು ಲೇಖಕ ಹೀಗೆ ಬಣ್ಣಿಸಿದ್ದಾರೆ : ಇದು ಜೀವದ ಜಾತ್ರೆ ಇದು ಮುಗಿಯದ ಯಾತ್ರೆ ಕನಸಿನಂಗಳ ಸೇರಿ ತೇಲೋಣ ಬೆಳದಿಂಗಳ ಬೋನ ತಿನ್ನೋಣ ಹೊಸ ಕನಸಿನ ಕತೆಯ ಹೇಳೋಣ ಕಣ್ಣಗಲದ ಆಗಸವ ಬರೆಯೋಣ ಎಂದು ಬರೆಯುತ್ತಾ ಸುರೇಶ್ ಕವಿಯೂ ಆಗುತ್ತಾರೆ.
©2024 Book Brahma Private Limited.