‘ಗರ್ಭದಾರಣೆ ಸಂದೇಹ ನಿವಾರಣೆ’ ಕೃತಿಯು ಎಚ್. ಗಿರಿಜಮ್ಮ ಅವರ ಸಂತಾನೋತ್ಪತ್ತಿ ಸಾಧ್ಯತೆಗಳಿಗೆ ಸಂಬಂಧಿಸಿದಂತೆ ಜನಸಾಮಾನ್ಯರಿಗೆ ತಿಳುವಳಿಕೆ ಕೊಡುವ ಕೈಪಿಡಿಯಾಗಿದೆ. ಗಂಡು ಹೆಣ್ಣಿನ ಸಾಂಗತ್ಯ, ಗರ್ಭ ನಿರೋದಕಗಳ ಬಳಕೆ, ಗರ್ಭದಾರಣೆ, ಗರ್ಭಿಣಿ, ಸ್ತ್ರೀಯರು ವಹಿಸಬೇಕಾದ ಎಚ್ಚರಿಕೆಗಳು, ಮೂಢನಂಬಿಕೆಗಳು, ಆಹಾರಕ್ರಮ, ಸ್ತನ್ಯಪಾನದ ಮಹತ್ವ, ಹೆರಿಗೆ, ಇತ್ಯಾದಿ ವಿಷಯಗಳ ಕುರಿತ ವಿವರಗಳಿವೆ. ಪ್ರಶ್ನೋತ್ತರಗಳ ಮಾದರಿಯ ನಿರೂಪಣೆ ವಿಷಯವನ್ನು ಓದುಗರಿಗೆ ಸುಲಭವಾಗಿ ಮುಟ್ಟಿಸುವಂತಿದೆ. ರೇಖಾಚಿತ್ರಗಳ ಬಳಕೆ ಪುಸ್ತಕದ ಸೊಗಸನ್ನು ಹೆಚ್ಚಿಸಿದೆ.
ಡಾ. ಎಚ್. ಗಿರಿಜಮ್ಮ- ಹುಟ್ಟಿದ್ದು ದಾವಣಗೆರೆ. ಪಿಯುಸಿವರೆಗೆ ಓದಿದ್ದು ಅಲ್ಲಿಯೇ. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ. ಯಶಸ್ವಿ ವೈದ್ಯಳಾಗಬೇಕು ಎನ್ನುವ ಅವರ ತಾಯಿಯ ಆಸೆ ಅವರನ್ನು ವೈದ್ಯಕೀಯ ಅಧ್ಯಯನದಲ್ಲಿ ತೊಡಗಿಕೊಳ್ಳುವಂತೆ ಮಾಡಿತು. ಚಿಕ್ಕ ವಯಸ್ಸಿನಲ್ಲಿ ಕಾದಂಬರಿಗಾರ್ತಿ ತ್ರಿವೇಣಿ ಬರಹದಿಂದ ಪ್ರಭಾವಿತರಾದವರು ಗಿರಿಜಮ್ಮ. ಅವರ ಮೊದಲ ಕತೆ ಹೂಬಳ್ಳಿಗೆ ಈ ಆಸರೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಚಂದಮಾಮ, ತಮಸೋಮ ಜ್ಯೋತಿರ್ಗಮಯ, ಅಂಬರತಾರೆ, ಸೇರಿದಂತೆ ಒಟ್ಟು 27 ಕಾದಂಬರಿಗಳು ಪ್ರಕಟವಾಗಿವೆ. ಅರ್ಧಾಂಗಿ, ಸಂಜೆಮಲ್ಲಿಗೆ, ಅನಾವರಣ, ಅನೇಕ ನೀಳ್ಗತೆಗಳು ಮಯೂರದಲ್ಲಿ ಪ್ರಕಟವಾಗಿವೆ. ಒಟ್ಟು 50 ಕತೆಗಳನ್ನು ಬರೆದಿದ್ದಾರೆ. ಐದು ಕಥಾಸಂಗ್ರಹಗಳು ...
READ MORE