ಕಲ್ಲೇಶ್ ಕುಂಬಾರ್ ಅವರ ಜೀವನ ಚಿತ್ರ ‘ಡಾ. ಶ್ರೀರಾಮ ಇಟ್ಟಣ್ಣವರ’. ಸೃಜನಶೀಲ ಸಾಹಿತಿ, ಸಂಶೋಧಕ, ವಿಮರ್ಶಕ ಮತ್ತು ಜಾನಪದ ವಿದ್ವಾಂಸ ಡಾ. ಶ್ರೀರಾಮ ಇಟ್ಟಣ್ಣವರ ಬಗ್ಗೆ ಸಂಪುರ್ಣ ಮಾಹಿತಿ, ಬದುಕು ಮತ್ತು ಬರಹಗಳ ಕುರಿತು ವಿಶ್ಲೇಷಣಾತ್ಮಕವಾಗಿ ವಿವರಿಸಿರುವ ಕೃತಿ ಇದಾಗಿದೆ.
ಬೆಳಗಾವಿ ಜಿಲ್ಲೆಯ ಹಾರೂಗೇರಿ ಗ್ರಾಮ (ಜನನ: 06-05-1967) ಹುಟ್ಟೂರು. ಧಾರವಾಡ, ದಾವಣಗೆರೆ ಮತ್ತು ಬೀದರ್ ನಲ್ಲಿ ವಿದ್ಯಾಭ್ಯಾಸ. ಹಾರೂಗೇರಿಯ ಶ್ರೀ ಕರೇಸಿದ್ಧೇಶ್ವರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. 'ಉಸುರಿನ ಪರಿಮಳವಿರಲು' ಕಥಾಸಂಕಲನ ಮತ್ತು 'ಪುರುಷ ದಾರಿಯ ಮೇಲೆ' ಕವನಸಂಕಲನಗಳ ಪ್ರಕಟಣೆ. ಜೊತೆಗೆ,ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕಥೆ, ಕವನ,ಲೇಖನಗಳ ಪ್ರಕಟಣೆಯಾಗಿವೆ. 'ಪಾಪು ಕಥಾ ಪ್ರಶಸ್ತಿ', 'ಜಯತೀರ್ಥ ರಾಜಪುರೋಹಿತ ಕಥಾ ಪ್ರಶಸ್ತಿ', 'ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ, 'ವಿಜಯವಾಣಿ ದೀಪಾವಳಿ ಕಥಾಸ್ಪರ್ಧೆ', 'ಕರವೇ ಮಾಸಿಕದ ಕಥಾಸ್ಪರ್ಧೆ', 'ಗುರುತು ಮಾಸಿಕ ಕಥಾಸ್ಪರ್ಧೆ', 'ಪ್ರಜಾವಾಣಿ ದೀಪಾವಳಿ ಕಾವ್ಯಸ್ಪರ್ಧೆ', 'ತಿಂಗಳು ಮಾಸಿಕ ಪತ್ರಿಕೆಯ ಕಾವ್ಯಸ್ಪರ್ಧೆ', 'ಮೊಗವೀರ ಮಾಸಿಕದ ...
READ MORE