ದಿಲೀಪ ಪುರಾಣ ಪುರುಷರ ಜೀವನಗಾಥೆ ಪುಸ್ತಕವನ್ನು ಲೇಖಕ ಟಿ. ಕೇಶವ ಭಟ್ಟ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ರಾಜ ದಿಲೀಪನ ಕುರಿತಾಗಿ ಮಹಾಪರಾಕ್ರಮಿ ಚಕ್ರವರ್ತಿಯಾದರೂ ತಾನು ಸೇವಿಸುತ್ತಿದ್ದ ಗೋವಿನ ರಕ್ಷಣೆಗಾಗಿ ಸ್ವತಃ ತನ್ನ ಪ್ರಾಣವನ್ನೇ ಬಲಿದಾನ ಗೈಯಲು ಸಿದ್ಧನಾದ ಕರ್ತವ್ಯನಿಷ್ಠ, ಹಿರಿಯ ಅಧಿಕಾರದಲ್ಲಿರುವವರ ಜೀವನ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟ ಕೀರ್ತಿವಂತ ಎಂದು ಲೇಖಕರು ಕೃತಿಯಲ್ಲಿ ದಿಲೀಪನ ಮಹತ್ವವನ್ನು ಸಾರುತ್ತಾರೆ. ರಾಜ ದಿಲೀಪ ಪುರಾಣದಲ್ಲಿ ಬರುವ ಮಹತ್ವಪೂರ್ಣ ಪಾತ್ರ. ಈತನ ಅಡಳಿತ ವೈಖರಿ, ತನ್ನ ತಪ್ಪಿನ ಬಗೆಗೆ ಅರಿವಾದಾಗ ಆತ ನಡೆಯುವ ರೀತಿ, ಇತರ ರಾಜರಿಗೆ ಮಾದರಿಯಾಗುವ ಬಗೆ, ಎಷ್ಟೇ ಯುಗ ಕಳೆದರೂ ಆತ ಹೇಗೆ ಪ್ರೇರಣಾ ಶಕ್ತಿಯಾಗುತ್ತಾನೆ ಎಂಬುದನ್ನು ಸವಿಸ್ತಾರವಾಗಿ ಆತನ ಜೀವನದ ಬಗೆಗೆ ಈ ಕೃತಿಯಲ್ಲಿ ವಿವರಿಸಲಾಗಿದೆ.
©2025 Book Brahma Private Limited.