ಲೇಖಕ ಶಂಕರದೇವರು ಹಿರೇಮಠ ಅವರು ಸಂಪಾದಿಸಿರುವ ಕೃತಿ ಚಿಣ್ಣರ ಸಂಭ್ರಮ. ಇದು ರಾಜ್ಯಮಟ್ಟದ ಪ್ರಾತಿನಿಧಿಕ ಮಕ್ಕಳ ಹಾಡುಗಳ ಸಂಕಲನವಾಗಿದೆ. ಶಾಲಾ ವಿದ್ಯಾರ್ಥಿಗಳು ಮತ್ತು ಮಕ್ಕಳ ಸಾಹಿತಿಗಳು ಬರೆದ ಮಕ್ಕಳ ಹಾಡುಗಳ ಸಂಗ್ರಹವಿದು.
ಮಕ್ಕಳ ಸಾಹಿತಿಗಳು ಮಂಡಲಗಿರಿ ಪ್ರಸನ್ನ ಅವರು ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ. ಅವರು ಹೇಳುವಂತೆ, ಮಕ್ಕಳ ಸಾಹಿತ್ಯ ಪರಿಷತ್ತು ರಾಯಚೂರು ಘಟಕವು ಕರೋನಾದಂತಹ ಮಹಾಮಾರಿಯ ಸಂದಿಗ್ಧ ಕಾಲಘಟ್ಟದಲ್ಲಿ ಮಕ್ಕಳ ಕಾವ್ಯರಚನಾ ಸ್ಪರ್ಧೆ ಏರ್ಪಡಿಸಿದ್ದು ಅದಕ್ಕಾಗಿ ಪರಿಷತ್ತಿನ ಅಧ್ಯಕ್ಷರಾದ ಶಂಕರದೇವರು ಅವರ ಸೃಜನಶೀಲತೆಗೆ ಮೊದಲು ಆಭಿನಂದನೆಗಳು. ದೇಶ ಎದುರಿಸುತ್ತಿರುವ ಕರೋನಾದಂತಹ ಮಾಹಾಮಾರಿಯ ಈ ಸಂದರ್ಭದಲ್ಲಿ ಮಕ್ಕಳ ಸಾಹಿತಿಗಳನ್ನು ಕ್ರಿಯಾಶೀಲವಾಗಿಡುವ ಅವರ ಶ್ರಮ ಅರ್ಥಪೂರ್ಣ, ಮಕ್ಕಳ ಸಾಹಿತ್ಯದ ಕ್ರಿಯಾಶೀಲ ಬರವಣಿಗೆಗೆ ಸಮಾಜದ ವಿವಿಧ ಮನಸುಗಳನ್ನು ಒಂದೇ ಸಾರಿ ಕೆಲಸಕ್ಕೆ ಹಚ್ಚುವುದು ಅವರ ಸಂಘಟನಾ ಉಲಸದ ಸಾಮರ್ಥ್ಯವನ್ನು ತೋರುತ್ತದೆ. ಮಕ್ಕಳ ಸಾಹಿತ್ಯವನ್ನು 'ಪೌಢತೆಯ ಹೆಗಲೇರಿದ ಮುಗ್ಧತೆ’ ಎಂದು ಕನ್ನಡದ ಖ್ಯಾತ ಸಾಹಿತಿ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ಒಂದು ಕಡೆ ಹೇಳಿದ ನೆನಪು. ಇದರ ಅರ್ಥ ಮಕ್ಕಳ ಸಾಹಿತ್ಯ ರಚನೆ ಮಾಡುವವರು ಮಕ್ಕಳ ಲಯ ಹಿಡಿದು ಸಾಗಬೇಕು. ಮಕ್ಕಳ ಆಸಕ್ತಿ, ಭಾಷೆ, ಲಯದಲ್ಲೇ ಮಕ್ಕಳ ಸಾಹಿತ್ಯರಚನೆಯಾಗಬೇಕು. ಪಾಂಡಿತ್ಯವಲ್ಲದ ಸರಳ ಶಬ್ದ ಪ್ರಯೋಗ, ಮಕ್ಕಳ ಮಿತಿಗೆ ನಿಲುಕುವ ಮಕ್ಕಳನ್ನು ಕಾಡುವ ಸಣ್ಣಸಣ್ಣ ಸಂಗತಿಗಳಿಗೆ ಉತ್ತರಿಸುವ, ರಂಜಿಸುವ ರೀತಿಯಲ್ಲಿ ನಾವು ಹೇಳಿದಾಗ ಅದು ಮಕ್ಕಳಿಗೆ ಇಷ್ಟವಾದೀತು.ಮ.ಸಾ.ಪ. ರಾಯಚೂರು ಘಟಕ ಏರ್ಪಡಿಸಿದ್ದ ಮಕ್ಕಳ ಕಾವ್ಯ ರಚನಾ ಸ್ಪರ್ಧೆಗೆ ಸುಮಾರು 56 ಕವಿತೆಗಳು ಬಂದಿದ್ದವು. ಅವುಗಳನ್ನು ಸಂಗ್ರಹಿಸಿ ಇದೀಗ 'ಚಿಣ್ಣರ ಸಂಭ್ರಮ' ಎಂಬ ಸಂಕಲನವನ್ನು ಮ.ಸಾ.ಪ. ರಾಯಚೂರು ಹೊರತರುತ್ತಿರುವುದು ಮತ್ತೊಂದು ದಾಖಲೆ, ವಿದ್ಯಾರ್ಥಿಗಳಿಂದ ಹಿರಿಯರು, ಮಹಿಳೆಯರು ಈ ಸರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷ, ಪರಿಸರ, ಶಾಲೆ, ಬಾಲ್ಯ ದೈವಿಶಕ್ತಿ, ಈಗೀಗ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕರೊನಾ, ಆದರಿಂದಾದ ರಜೆಯ ಅನುಭವಗಳೇ ಮೊದಲಾದವು, ಈ ಹಿನ್ನೆಲೆಯಲ್ಲಿ ನಮ್ಮ ಮಕ್ಕಳ ಸಾಹಿತ್ಯ ಬೆಳೆದು ಬರಲಿ, ಆ ಮೂಲಕ ಈ ಬದುಕು ಹುಲುಸಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
©2024 Book Brahma Private Limited.