‘ಚರ್ನೋಬಿಲ್ ದುರಂತ’ ಕೃತಿಯು ಮೂಲತಃ ಸ್ವೆಟ್ಲಾನಾ ಅಲೆಕ್ಸಿವಿಚ್ ಅವರ ‘ವಾಯ್ಸ್ ಸ್ ಫ್ರಮ್ ಚರ್ನೋಬಿಲ್’ ದ ಓರಲ್ ಹಿಸ್ಟರಿ ಆಫ್ ಎ ನ್ಯೂಕ್ಲಿಯರ್ ಡಿಸಾಸ್ಟರ್ ಕಾದಂಬರಿಯನ್ನು ಸುಮಂಗಲಾ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯು 2015 ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದಿರುತ್ತದೆ. ಕೃತಿಗೆ ಬೆನ್ನುಡಿ ಬರೆದಿರುವ ನಾಗೇಶ ಹೆಗಡೆ ಅವರು, ನಮ್ಮ ಭೋಪಾಲ ದುರಂತವನ್ನು ಮೀರಿಸಿದ್ದು ರಷ್ಯದ ಚರ್ನೋಬಿಲ್ ದುರಂತ. ಅಲ್ಲಿ 1986 ರಲ್ಲಿ ಸ್ಪೋಟಗೊಂಡ ಪರಮಾಣು ರಿಯಾಕ್ಷನಿನ ಸುತ್ತಲೂ ಇಂದಿಗೂ ದುರಂತ ನಿರಂತರವಾಗಿದೆ. ವಿಕೃತ ಮಕ್ಕಳು ಜನಿಸುತ್ತಲೇ ಇದ್ದಾರೆ. ಅದು ಎಂಥಾ ವಿಕೃತಿ ಎಂದರೆ ‘ನಾವೇನಾದ್ರೂ ಈ ಮಗೂನಾ ಟೀವಿಲಿ ತೋರಿಸಿದ್ರೆ, ಒಬ್ಬ ತಾಯಿಯೂ ಮಕ್ಕಳನ್ನು ಹೆರೋದಿಲ್ಲ’ ಎನ್ನುವಷ್ಟು. ಅಲ್ಲಿನ ಸಂಕಷ್ಟ ಸರಮಾಲೆಗಳ ಎದೆ ಬಿರಿಯುವ ದೃಶ್ಯಗಳನ್ನು ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತೆ ಸ್ವೆಟ್ಲಾನಾ ಅಲೆಕ್ಷಿವಿಚ್ ಇಲ್ಲಿ ನಿರೂಪಿಸಿದ್ದಾರೆ. ಸಾಹಿತ್ಯಲೋಕಕ್ಕೆ ವಿಶಿಷ್ಟವೆನಿಸಿದ ಕಥನ ಶೈಲಿ ಅವರದು. ಇಲ್ಲಿ ನೈಜ್ಯ ಪಾತ್ರಗಳ ಮಾತಿನಲ್ಲೇ ಪರಮಾಣು ಮಾದರಿಯ ಕರಾಳ ಚಿತ್ರಣ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಮೂಲ ರಷ್ಯನ್ ಭಾಷೆಯಿಂದ ಇಂಗ್ಲಿಷ್ ಗೆ ತರ್ಜುಮೆಯಾಗಿದ್ದನ್ನು ಅಷ್ಟೇ ಸತ್ವಪೂರ್ಣವಾಗಿ ಕತೆಗಾರ್ತಿ ಸುಮಂಗಲಾ ಅವರು ಕನ್ನಡಕ್ಕೆ ಪಡಿ ಮೂಡಿಸಿದ್ದಾರೆ ಎಂದಿದ್ದಾರೆ.
©2025 Book Brahma Private Limited.